ಜಗತ್ತಿಗೆ ವರವಾದ ಶರಣರ ಕಾಯಕ ಸಿದ್ಧಾಂತ

| Published : May 03 2024, 01:01 AM IST

ಸಾರಾಂಶ

ಅಮೇರಿಕಾದಲ್ಲಿ ಕಾರ್ಮಿಕರ ದುಡಿಮೆಯ ಸಮಯವನ್ನು ಕಡಿತಗೊಳಿಸಲು ಆರಂಭಗೊಂಡ ಕಾರ್ಮಿಕ ಚಳವಳಿ ಸಮಾಜವನ್ನು ಹುಟ್ಟು ಹಾಕಲು ಕಾರಣವಾಯಿತು. ಆದರೆ ಬಸವಾದಿ ಶರಣರು ಅನುಷ್ಠಾನಕ್ಕೆ ತಂದ ಕಾಯಕ ಸಿದ್ಧಾಂತವು ಜಗತ್ತಿನ ಆರ್ಥಿಕ ಪ್ರಗತಿಗೆ ವರದಾನವಾಯಿತು ಎಂದು ಪ್ರೊ.ಲಕ್ಷ್ಮೀ ಮೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಮೇರಿಕಾದಲ್ಲಿ ಕಾರ್ಮಿಕರ ದುಡಿಮೆಯ ಸಮಯವನ್ನು ಕಡಿತಗೊಳಿಸಲು ಆರಂಭಗೊಂಡ ಕಾರ್ಮಿಕ ಚಳವಳಿ ಸಮಾಜವನ್ನು ಹುಟ್ಟು ಹಾಕಲು ಕಾರಣವಾಯಿತು. ಆದರೆ ಬಸವಾದಿ ಶರಣರು ಅನುಷ್ಠಾನಕ್ಕೆ ತಂದ ಕಾಯಕ ಸಿದ್ಧಾಂತವು ಜಗತ್ತಿನ ಆರ್ಥಿಕ ಪ್ರಗತಿಗೆ ವರದಾನವಾಯಿತು ಎಂದು ಪ್ರೊ.ಲಕ್ಷ್ಮೀ ಮೋರೆ ಹೇಳಿದರು.

ನಗರದ ವೀರಶೈವ ಮಹಾಸಭೆಯ ಲಿಂಗಾಯತ ಭವನದಲ್ಲಿ ಬುಧವಾರ ಕಾಯಕ ದಿನ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

ಡಾ.ಬನುದೇವಿ ಸಂಕಣ್ಣವರ ಮಾತನಾಡಿ, ಕಾಯಕ ತತ್ವವು ಕನ್ನಡ ನಾಡು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ಮಚಾರಿಗಳಾದ ಸುಭಾಸ ಮೋರೆ, ವಸಂತ ಕಾಂಬಳೆ, ಶಾಮ ಗೊಲ್ಲರ, ಸರೋಜಾ ಸರ್ಜಾ ಮೋರೆ ಮತ್ತು ಶಾಂತಾ ರಜಪೂತ ಅವರನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಯುವರಾಜ ಛೋಳಕೆ ಶಿವದಾಸಿಮಯ್ಯ ಸ್ಮರಣಾರ್ಥ ೨೫,೦೦೦ ರು.ಗಳ ದತ್ತಿ ನಿಧಿ ನೀಡಿದರು. ಅಧ್ಯಕ್ಷತೆ ವಿ.ಸಿ. ನಾಗಠಾಣ ವಹಿಸಿದ್ದರು. ಜಂಬುನಾಥ ಕಂಚ್ಯಾಣಿ, ಡಾ.ಉಷಾದೇವಿ ಹಿರೇಮಠ ಮತ್ತು ಗಂಗಾಧರ ಸಾಲಕ್ಕಿ, ಬಿ.ಎಂ. ಪಾಟೀಲ, ರಾಜಶೇಖರ ಉಮರಾಣಿ, ಡಾ. ವಿ.ಡಿ. ಐಹೊಳ್ಳಿ, ಈರಣ್ಣ ತೊಂಡಿಕಟ್ಟಿ, ಬಿ.ಎಚ್. ಬಾದರಬಂಡಿ, ಎಸ್.ಜಿ. ನಾಡಗೌಡರ, ಎಂ.ಎಂ. ಅವರಾದಿ ಎಸ್.ವೈ.ಗದಗ, ಪರಶುರಾಮ ಪೋಳ, ವಿ.ಎಸ್. ತೇಲಿ, ಮ.ಗು. ಯಾದವಾಡ, ಶಾರದಾ ಕೊಪ್ಪ, ಎಸ್.ಬಿ. ದೊಡಮನಿ, ಎಸ್.ಎಸ್. ಕೊಕಟನೂರ ಮುಂತಾದವರು ಉಪಸ್ಥಿತರಿದ್ದರು.