ಶರಣರ ವಚನಗಳೇ ಮಾನವ ಹಕ್ಕುಗಳ ಮೂಲ. ಆದರ್ಶ ಸಮಾಜದ ನಿರ್ಮಾಣದಲ್ಲಿ ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಜೀವನವನ್ನು ಬದಲಿಸುವ ದಿಕ್ಸೂಚಿಯಾಗಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ವಿಜಯಪುರ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ಶರಣರ ವಚನಗಳೇ ಮಾನವ ಹಕ್ಕುಗಳ ಮೂಲ. ಆದರ್ಶ ಸಮಾಜದ ನಿರ್ಮಾಣದಲ್ಲಿ ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಜೀವನವನ್ನು ಬದಲಿಸುವ ದಿಕ್ಸೂಚಿಯಾಗಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ವಿಜಯಪುರ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ನೀಲಮ್ಮ ಮುತ್ತಪ್ಪ ಸಂಕಣ್ಣನವರ ದತ್ತಿ, ದಿ. ಪ್ರೊ.ತಿಪ್ಪಣ್ಣ ಕರೆಪ್ಪ ಕಲ್ಯಾಣಗೋಳ ದತ್ತಿ, ದಿ.ರಾಮಗೊಂಡಪ್ಪ ನಿಂಗಪ್ಪ ನಾಗಠಾಣ ದತ್ತಿ, ದಿ.ಗಂಗಾಧರ ಕೋರಳ್ಳಿ ದತ್ತಿ ಹಾಗೂ ದಿ. ನಾಗಪ್ಪ ರೇವಪ್ಪ ಶೇಠೆ ದತ್ತಿ ಎಂಬ ವಿವಿಧ ದತ್ತಿನಿಧಿ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಮನುಜಮತ ವಿಶ್ವಪಥ ಎಂಬುದನ್ನರಿತು ಜಾತ್ಯಾತೀತ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರ ಶ್ರಮಿಸೋಣ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎ.ಕಾಲೇಬಾಗ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಇಡೀ ಜಿಲ್ಲೆಯಾದ್ಯಂತ ಸಾಮರಸ್ಯ ಬೆಸೆಯುವ ಮಹೋನ್ನತ ಕಾರ್ಯ ಮಾಡುತ್ತಿದ್ದು, ನಾಡು ನುಡಿಯ ಗೌರವವನ್ನು ಹೆಚ್ಚಿಸಿದೆ ಎಂದರು. ತಿಕೋಟಾ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಸಮಾಜದ ಸೂಕ್ಷ್ಮ ಸಂವೇದನೆಗಳನ್ನು ಇಂದು ನಾವೆಲ್ಲರೂ ಅರಿತುಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಮೂವತ್ತಕ್ಕೂ ಅಧಿಕ ಮಾನವ ಹಕ್ಕುಗಳಿದ್ದು, ತನ್ನನ್ನು ತಾನು ಗೌರವಿಸುವ ಮೂಲಕ ಅವುಗಳ ಮಹತ್ವವನ್ನು ಅರಿತು ನಡೆಯೋಣ ಎಂದರು.ಶರಣ ಚಿಂತಕಿ ಚೈತನ್ಯ ಮುದ್ದೇಬಿಹಾಳ ಮಾತನಾಡಿ, ಅರಿವೇ ಗುರು ಎಂಬಂತೆ ಅಷ್ಠಾವರ್ಣಗಳು, ಪಂಚಾಚಾರಗಳು, ಷಟಸ್ಥಲಗಳು, ಶಿವಾಚಾರ, ಗಣಾಚಾರಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಮೂಲಕ ಬಸವಾದಿ ಶರಣರು ನೀಡಿದ ಸಂದೇಶಗಳನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು ಎಂದರು.
ಮುಖ್ಯ ಅತಿಥಿಗಳಾಗಿ ಶಶಿಧರ ಸಂಕಣ್ಣನವರ, ಭಾಗೀರಥಿ ಸಿಂಧೆ, ಆಶಾ ಬಿರಾದಾರ, ಶಶಿಕಲಾ ಬಿರಾದಾರ ಮಾತನಾಡಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಷ್ಟ್ರಮಟ್ಟದ ಐಎಂಎ ಪ್ರಶಸ್ತಿ ಪುರಸ್ಕೃತ ಡಾ.ಸುರೇಶ ಕಾಗಲಕರರೆಡ್ಡಿ ಹಾಗೂ ಪತ್ರಿಕಾ ಮಾಧ್ಯಮದ ಮುದ್ದೇಬಿಹಾಳ ತಾಲೂಕು ನೂತನ ಅಧ್ಯಕ್ಷ ಡಿ.ಬಿ.ವಡವಡಗಿ, ಇಂಡಿ ತಾಲೂಕಿನ ಅಬುಶಾಮ ಹವಾಲ್ದಾರ, ತಾಳಿಕೋಟೆಯ ಮೈಬೂಬಸುಬಾನಿ ಶಿರಸಗಿ, ನಿಡಗುಂದಿ ಬಸವರಾಜ ಹೆರಕಲ್, ತಿಕೋಟಾದ ಸಾತಲಿಂಗಯ್ಯ ಸಾಲಿಮಠ, ಚಡಚಣ ರಮೇಶ ಬಿರಾದಾರ, ಕೊಲ್ಹಾರದ ಅರುಣಕುಮಾರ ಔರಸಂಗ, ಆಲಮೇಲ ಅವಧೂತ ಬಂಡಗಾರ ಸೇರಿದಂತೆ ಮುಂತಾದ ಪದಾಧಿಕಾರಿಗಳನ್ನು ಜಿಲ್ಲಾ ಕಸಾಪ ಗೌರವಿಸಿ ಸನ್ಮಾನಿಸಿತು.
ದಿಪರತ್ನಶ್ರೀ ಮುದ್ದೇಬಿಹಾಳ ಪ್ರಾರ್ಥಿಸಿ, ವಿಜಯಪುರ ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಸ್ವಾಗತಿಸಿ ಗೌರವಿಸಿದರು. ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಯಮನಪ್ಪ ಪವಾರ ನಿರೂಪಿಸಿದರು. ಶಿಕ್ಷಕ ಎಸ್.ಬಿ.ರೆಡ್ಡಿ ವಂದಿಸಿದರು.ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೆ.ಎಸ್.ಹಣಮಾಣಿ, ಬಿ.ಎಂ.ಆಜೂರ, ಶ್ರೀಕಾಂತ ನಾಡಗೌಡ, ಮಹಾದೇವಪ್ಪ ಮೋಪಗಾರ, ರಾಜೇಶ್ವರಿ ಮೋಪಗಾರ, ಸುಖದೇವಿ ಅಲಬಾಳಮಠ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಜಿ.ಎಸ್.ಬಳ್ಳೂರ, ರಿಯಾಜ್ ಪಿಂಜಾರ, ಎಂ.ಎನ್.ನಿಂಬಾಳ, ಶಾಂತಾ ಜೋಶಿ, ಡಾ.ಚಿರಂಜೀವಿ, ಡಾ.ಪ್ರಶಾಂತ ಬಾಬಾನಗರ, ಮಲ್ಲಿಕಾರ್ಜುನ ಕೆಳಗಡೆ, ಪೀರಾಸಾಹೇಬ ವಾಲಿಕಾರ, ಅಹ್ಮದ ವಾಲಿಕಾರ, ರಾಜಶ್ರೀ ವೊಪಗಾರ, ರಾಜಶೇಖರ ಡೋಣಜಮಠ, ಪರಶುರಾಮ ಚಲವಾದಿ, ಡಾ.ಜಾಫರ್ ಸಾಧೀಕ್, ಸಿದ್ದು ಬೀಳಗಿ, ಡಾ ಚಿರಂಜೀವಿ ಬಂಗಾ, ಮಹಾದೇವ ಮೋಪಗಾರ, ಶ್ರೀಕಾಂತ ನಾಡಗೌಡ, ಎಂ.ಎ.ವಾಲೀಕಾರ, ಉಮೇಶ ಕಟ ಮುಂತಾದವರಿದ್ದರು.