ಮನಸು ಶಾಂತಗೊಳಿಸಲು ಶರಣರ ಸಂಗ ಅಗತ್ಯ

| Published : Dec 28 2023, 01:45 AM IST

ಸಾರಾಂಶ

ಬದುಕಿನಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕೆಂದು ಶರಣರು ಹೇಳಿ ಕೊಟ್ಟಿದ್ದಾರೆ. ನಮ್ಮ ಮನಸು ತಂಪು ಮಾಡಲು ಶರಣರ ಸಂಘ ಅಗತ್ಯವಾಗಿದೆ ಎಂದು ಅಂಕಲಿ-ಕೈತನಾಳಮಠದ ಶ್ರೀ ಫಕೀರಜ್ಜ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬದುಕಿನಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕೆಂದು ಶರಣರು ಹೇಳಿ ಕೊಟ್ಟಿದ್ದಾರೆ. ನಮ್ಮ ಮನಸು ತಂಪು ಮಾಡಲು ಶರಣರ ಸಂಘ ಅಗತ್ಯವಾಗಿದೆ ಎಂದು ಅಂಕಲಿ-ಕೈತನಾಳಮಠದ ಶ್ರೀ ಫಕೀರಜ್ಜ ಸ್ವಾಮೀಜಿ ಹೇಳಿದರು.

ನಗರದ ವೀರಭದ್ರೇಶ್ವರ ಕಾರ್ತಿಕೋತ್ಸವ ಸಂದರ್ಭ ದೇವಸ್ಥಾನ ಆವರಣದಲ್ಲಿ ಭಕ್ತವೃಂದಕ್ಕೆ ಆಶೀರ್ವಾದ ನೀಡಿ ಮಾತನಾಡಿದ ಅವರು, ಬಂಗಾರ, ಬೆಳ್ಳಿಯಿಂದ ಶೃಂಗಾರಗೊಂಡರೆ ಸಾಲದು. ನಮ್ಮ ಆಚರಣೆ ಬಂಗಾರವಾಗಬೇಕು. ಚೆನ್ನಾಗಿ ಕೆಲಸ ಮಾಡುವುದೇ ಆಚಾರ. ಕೈ ಇರುವತನಕ ಚಂದದ ಕೆಲಸ ಮಾಡಿ. ಮಾತು ಬಲ್ಲವರು ಎಲ್ಲರ ಮನಸ್ಸು ಗೆಲ್ಲುವಂತೆ ಮಾತನಾಡಬೇಕು ಎಂದರು.

ಒಳ್ಳೆಯ ವಿಚಾರ ಆಲಿಸಿ, ನಮ್ಮಲ್ಲಿರುವ ಒಳ್ಳೆಯ ವಿಚಾರ ವ್ಯಕ್ತಪಡಿಸಬೇಕು. ಹೀಗಿದ್ದಾಗ ಮಾತ್ರ ಹೆಚ್ಚಿನ ಜ್ಞಾನ ಬರಲು ಸಾಧ್ಯ ಎಂದರು.

ಈ ವೇಳೆ ಶಿವು ಬಾಗೇವಾಡಿ, ಚನ್ನಪ್ಪ ಗುಣಕಿ, ಡಾ.ಪಿ.ವಿ.ಪಟ್ಟಣ, ಅಶೋಕ ಶೀಲವಂತ, ಮಲ್ಲಣ್ಣ ಬಾವಲತ್ತಿ, ಕಿರಣ ಆಳಗಿ, ಕಾಡಪ್ಪ ಪಟ್ಟಣ, ಶಿವಾನಂದ ಬುದ್ನಿ, ಚನಬಸಯ್ಯ ಮಠಪತಿ, ಲಿಂಗದ, ರಾಜು ಲುಕ್ಕ, ಮಲ್ಲಪ್ಪ ಹೂಲಿ ಸೇರಿದಂತೆ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗೂ ವೀರಭದ್ರೇಶ್ವರ ಕಾರ್ತಿಕೋತ್ಸವ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.