‘ಶರಣರ ಜೀವಪರ ನಿಲುವು’ ಕೃತಿ ಸಂಸ್ಕೃತಿಯ ಪ್ರತೀಕ: ಸಾಹಿತಿ ಸಮುದ್ರವಳ್ಳಿ ವಾಸು

| Published : Jun 04 2024, 12:31 AM IST

‘ಶರಣರ ಜೀವಪರ ನಿಲುವು’ ಕೃತಿ ಸಂಸ್ಕೃತಿಯ ಪ್ರತೀಕ: ಸಾಹಿತಿ ಸಮುದ್ರವಳ್ಳಿ ವಾಸು
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಕವಯತ್ರಿ, ವಚನಗಾರ್ತಿ ಸುಶೀಲಾ ಸೋಮಶೇಖರ ಅವರ ‘ಶರಣರ ಜೀವಪರ ನಿಲುವು’ ಕೃತಿ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಕೃತಿಗಳು ಸಮಾಜದಲ್ಲಿ ಒಂದು ಬದಲಾವಣೆ ಮಾಡಲಿದೆ ಎಂದು ಸಾಹಿತಿ ಸಮುದ್ರವಳ್ಳಿ ವಾಸು ಬಣ್ಣಿಸಿದರು. ಹಾಸನದಲ್ಲಿ ಕವಯತ್ರಿ ನೀಲಾವತಿ ಸಿ.ಎನ್. ರವರ ಪ್ರಾಯೋಜಕತ್ವದಲ್ಲಿ ೩೧೮ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಮಾತನಾಡಿದರು.

೩೧೮ನೇ ಮನೆ ಮನೆ ಕವಿಗೋಷ್ಠಿ । ಕವಯತ್ರಿ ಸುಶೀಲಾ ಕೃತಿ ಕುರಿತು ಮಾತು

ಕನ್ನಡಪ್ರಭ ವಾರ್ತೆ ಹಾಸನ

ಹಿರಿಯ ಕವಯತ್ರಿ, ವಚನಗಾರ್ತಿ ಸುಶೀಲಾ ಸೋಮಶೇಖರ ಅವರ ‘ಶರಣರ ಜೀವಪರ ನಿಲುವು’ ಕೃತಿ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಕೃತಿಗಳು ಸಮಾಜದಲ್ಲಿ ಒಂದು ಬದಲಾವಣೆ ಮಾಡಲಿದೆ ಎಂದು ಸಾಹಿತಿ ಸಮುದ್ರವಳ್ಳಿ ವಾಸು ಬಣ್ಣಿಸಿದರು.

ನಗರದ ಸಾಲಗಾಮೆ ಮುಖ್ಯ ರಸ್ತೆಯಲ್ಲಿರುವ ಸೆಂಟ್ರಲ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ಕವಯತ್ರಿ ನೀಲಾವತಿ ಸಿ.ಎನ್. ರವರ ಪ್ರಾಯೋಜಕತ್ವದಲ್ಲಿ ೩೧೮ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದರು. ಕವಯತ್ರಿ, ವಚನಗಾರ್ತಿ ಸುಶೀಲಾ ಸೋಮಶೇಖರ ಅವರ ‘ಶರಣರ ವಚನಗಳಲ್ಲಿ ಜೀವಪರ ನಿಲುವು’ ಕೃತಿ ಕುರಿತು ಮಾತನಾಡಿ, ‘ಶರಣರ ವಚನಗಳು ಮಾನವ ಸಂಸ್ಕೃತಿಯ ಪ್ರತೀಕವಾಗಿವೆ. ಶರಣರು ತಾವು ಕಂಡುಂಡ ಅನುಭವಗಳನ್ನು ವಚನವಾಗಿಸಿದ್ದರು. ಆವರ ಈ ಕೃತಿಯಲ್ಲಿ ವಚನಗಳಲ್ಲಿ ಕಾವ್ಯಾಂಶ, ದಾಂಪತ್ಯ, ಮನೋಪರಿವರ್ತನೆ ಜೊತೆಗೆ ಕೃಷಿ ಚಟುವಟಿಕೆ ಕುರಿತು ವಿವರಗಳು ವಿಶೇಷವಾಗಿದೆ’ ಎಂದು ಹೇಳಿದರು.

‘ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ನೀಡುತ್ತವೆ. ೧೨ನೇ ಶತಮಾನ ವಚನ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದೆ. ಸಾಮಾಜಿಕ ಅಸಮಾನತೆ, ಮೌಢ್ಯ, ಅಸ್ಪೃಶ್ಯತೆ, ಅಂಧಾನುಕರಣೆ, ಅನಿಷ್ಟ ಪದ್ಧತಿಗಳ, ವಿರುದ್ಧ ಧ್ವನಿ ಎತ್ತಿದ್ದರು. ಅವರ ಬದುಕು ಬರಹ ಎರಡೂ ಒಂದೇ ಆಗಿತ್ತು. ಕೃತಿಕಾರರು ವಚನಗಳನ್ನು ಕೇವಲ ವಿಶ್ಲೇಷಣೆ ಮಾಡದೆ ಶರಣರ ಬದುಕು, ಶರಣರ ನಿಲುವುಗಳ ಜೊತೆಗೆ ವಾಸ್ತವ ನೆಲೆಗಟ್ಟಿನಲ್ಲಿ ಸಮಷ್ಠಿ ಪ್ರಜ್ಞೆಯನ್ನಿಟ್ಟುಕೊಂಡು ಅಚ್ಚುಕಟ್ಟಾಗಿ ತಮ್ಮ ಕೃತಿಯಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ’ ಎಂದು ವಿವರಿಸಿದರು.

ಕೃತಿಕರ್ತರಾದ ಸುಶೀಲಾ ಸೋಮಶೇಖರ ಮಾತನಾಡಿ, ಶರಣರ ನಿಲುವುಗಳು ಜನಸಾಮಾನ್ಯರಿಗೆ ಜೀವದ್ರವ್ಯವಾಗಿದೆ. ವಚನಕಾರರ ಆದರ್ಶ ಬದುಕೇ ಕೃತಿಗೆ ಪ್ರೇರಣೆ ಎಂದು ತಮ್ಮ ಕೃತಿ ಕುರಿತಂತೆ ವಿಸ್ತಾರವಾಗಿ ತಿಳಿಸಿದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಸುಶೀಲ ಸೋಮಶೇಖರ್ ಅವರ ಪ್ರಕಟಿತ ೨೦ ಕೃತಿಗಳಲ್ಲಿ ೬ ವಚನ ಸಾಹಿತ್ಯ ಕೃತಿಗಳಾಗಿ ವಚನ ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಪ್ರತಿಭೆಯಾಗಿ ಬೆಳಕಿಗೆ ಬಂದವರಾಗಿದ್ದಾರೆ ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಸರೋಜಾ ಟಿ.ಎಂ., ಪ್ರೇಮ ಪ್ರಶಾಂತ, ಬಿ.ಎಂ. ಭಾರತಿ ಹಾದಿಗೆ, ವೆಂಕಟೇಶ ಆರ್., ಧರ್ಮ ಕೆರಲೂರು, ರುಮಾನ ಜಬೀರ್, ಗಿರಿಜಾ ನಿರ್ವಾಣಿ, ಜಯಂತಿ ಚಂದ್ರಶೇಖರ್, ಲಲಿತ ಎಸ್., ವಸುಮತಿ ಜೈನ್, ಬಸವರಾಜು ಎಚ್.ಎಸ್., ಪ್ರಜ್ವಲ್ ಕೆ.ಎಂ., ದಿಬ್ಬೂರು ರಮೇಶ್, ಎಚ್.ಬಿ. ಚೂಡಾಮಣಿ, ಸಾವಿತ್ರಿ ಬಿ. ಗೌಡ, ಪದ್ಮಾವತಿ ವೆಂಕಟೇಶ, ವನಜಾ ಸುರೇಶ್, ವಾಣಿ ಮಹೇಶ್ ಕವನ ವಾಚಿಸಿದರು.

ಲೇಖಕಿ ಸುಮಾ ರಮೇಶ್, ಕಾಮಾಕ್ಷಿ ಬಿ.ಜಿ, ಜಯಲಕ್ಷ್ಮಿ, ರಾಮ್ ಠಾಕೂರ್, ರಾಣಿ ಚರಶ್ರೀ, ಗಾಯತ್ರಿ ಪ್ರಕಾಶ್, ಶ್ವೇತ ಮೋಹನ್, ಧನಲಕ್ಷ್ಮಿ, ಜಿ.ಆರ್. ಶ್ರೀಕಂತ್, ಕೆ.ಪ್ರಶಾಂತ ಕುಮಾರ್, ಎ.ವಿ ರುದ್ರಾಪ್ಪಾಜಿರಾವ್, ಜಯದೇವಪ್ಪ, ಪ್ರಣತಿ ಪಿ.ಹರಿತ್ಸಾ, ಪ್ರಜ್ಞಾ ಪಿ.ಹರಿತ್ಸಾ, ನಿರ್ಮಲ ಚಂದ್ರಶೇಖರ್. ಪದ್ಮಾವತಿ ವೆಂಕಟೇಶ್. ಬಿ.ಎಸ್.ವನಜಾ ಸುರೇಶ್, ಇತರರು ಇದ್ದರು.