ಭಕ್ತಸಾಗರದ ಮಧ್ಯೆ ಶರಣಬಸವೇಶ್ವರ ರಥೋತ್ಸವ

| Published : Apr 02 2024, 01:03 AM IST

ಸಾರಾಂಶ

ಶಿಗ್ಗಾವಿ ತಾಲೂಕಿನ ಸದಾಶಿವಪೇಟೆಯ ಶ್ರೀ ಶರಣಬಸವೇಶ್ವರ ೪೪ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಶಿಗ್ಗಾವಿ: ತಾಲೂಕಿನ ಸದಾಶಿವಪೇಟೆಯ ಶ್ರೀ ಶರಣಬಸವೇಶ್ವರ ೪೪ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಶ್ರೀ ಮಠದ ಪೀಠಾಧಿಪತಿ ಶ್ರೀ ಶಿವದೇವ ಶರಣರು ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು. ರಥೋತ್ಸವ ಸಕಲ ವಾದ್ಯ ವೈಭವಗಳೋಂದಿಗೆ ಶ್ರೀ ಮಠದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದು, ಉತ್ಸವಮೂರ್ತಿಗೆ ಹೂವಿನಮಾಲೆ ಹಣ್ಣು, ಕಾಯಿ ಸಮರ್ಪಿಸಿ ಭಕ್ತಿನಮನ ಸಲ್ಲಿಸಿದರು. ರಥೋತ್ಸವಕ್ಕೆ ಭಕ್ತರು ಬೃಹತ್ ಆಕಾರದ ಹೂವಿನ ಮಾಲೆಯನ್ನು ಮೆರವಣಿಗೆ ಮೂಲಕ ತಂದು ರಥೋತ್ಸವಕ್ಕೆ ಅರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ನೂತನ ದಂಪತಿಗಳು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆಯುವದರ ಮೂಲಕ ತಮ್ಮ ಭಕ್ತಿ ಹರಕೆಯನ್ನು ಸಂಪ್ರದಾಯಿಕವಾಗಿ ತೀರಿಸಿದರು. ರಥೋತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿಬಂದು ಪುನಃ ಶ್ರೀ ಮಠದ ಆವರಣಕ್ಕೆ ತಲುಪಿ ಸಮಾರೋಪಗೊಂಡಿತು. ಇದಕ್ಕೂ ಪೂರ್ವದಲ್ಲಿ ರಥೋತ್ಸವ ಕಾರ್ಯಕ್ರಮದವಿದ್ದ ಕಾರಣಕ್ಕೆ ಗ್ರಾಮದಲ್ಲಿ ನೀರು ಹಾಕುವದು, ರಂಗೋಲಿ ಹಾಕಿ ಮನೆಯ ಬಾಗಿಲು ಬೀದಿಗಳಿಗೆ ತಳಿರು ತೋರಣ ಕಟ್ಟಿ ಸ್ವಾಗತಿಸಲಾಯಿತು.

ಮುಖಂಡರಾದ ಶಂಭು ಕಿವುಡನವರ, ವೀರಬಸಪ್ಪ ಬಂಗಿ, ಎಸ್.ಎನ್. ಅತ್ತಿಗೇರಿ, ಶಿವಣ್ಣ ಹಿಂಡಿ, ಶಿವು ಹಿರೇಮಠ, ಗದಿಗಯ್ಯ ಹಿರೇಮಠ, ಗಂಗಾಧರ ಶೆಟ್ಟರ, ಗದಿಗೇಪ್ಪ ರವದಿ, ಶರಣಪ್ಪ ಹೊಳಲಾಪುರ, ಫಕ್ಕೀರಪ್ಪ ವಡವಿ, ರಮೇಶ ಕಲಿವಾಳ, ಈರಣ್ಣ ಶೆಟ್ಟರ, ಸಂಗಪ್ಪ ವಡವಿ, ಚಂದ್ರು ಸದಾಶಿವಪೇಟಿಮಠ, ಶಂಭಣ್ಣ ಹೊನ್ನಣ್ಣವರ, ಪ್ರಭಾಕರ ಬಡಿಗೇರ, ಪುಟ್ಟಪ್ಪ ಬಾಗಣ್ಣವರ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡರು.