ಸಾರಾಂಶ
ಬಾಗಲಕೋಟೆ: 12ನೇ ಶತಮಾನದಲ್ಲಿ ಶರಣರು ಗಣಿತ ಸಂಖ್ಯೆಗಳನ್ನು ವಚನಗಳಲ್ಲಿ ಬಳಸುವುದರ ಮೂಲಕ ಅಧ್ಯಾತ್ಮವನ್ನು ಸಮೀಕರಿಸಿದ್ದರು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ ಹೇಳಿದರು. ನಗರದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಗಣಿತಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ವಚನಗಳಲ್ಲಿ ಗಣಿತ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
12ನೇ ಶತಮಾನದಲ್ಲಿ ಶರಣರು ಗಣಿತ ಸಂಖ್ಯೆಗಳನ್ನು ವಚನಗಳಲ್ಲಿ ಬಳಸುವುದರ ಮೂಲಕ ಅಧ್ಯಾತ್ಮವನ್ನು ಸಮೀಕರಿಸಿದ್ದರು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ ಹೇಳಿದರು.ನಗರದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಗಣಿತಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ವಚನಗಳಲ್ಲಿ ಗಣಿತ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಣಿತ ನಮ್ಮ ಬದುಕಿನ ಅವಿಭಾಜ್ಯ ಅಂಗ. 12ನೇ ಶತಮಾನದಲ್ಲಿ ಶರಣರು ಗಣಿತದ ಸಂಖ್ಯೆಗಳನ್ನು ವಚನಗಳಲ್ಲಿ ಬಳಸುವುದರ ಮೂಲಕ ಅಧ್ಯಾತ್ಮವನ್ನು ಸಮೀಕರಿಸಿದ್ದಾರೆ. ಶೂನ್ಯವನ್ನು ಭಾರತೀಯರು ಕಂಡುಹಿಡಿದಿದ್ದಾರೆ. ಆ ಶೂನ್ಯವನ್ನು ಶರಣರು ವಿಶಿಷ್ಟವಾಗಿ ವಚನಗಳಲ್ಲಿ ಬಳಸಿದ್ದಾರೆ. ಗಣಿತದ ಸರಳ ರೇಖೆ, ಬಿಂದು, ತ್ರಿಭುಜ, ಚತುರ್ಭುಜ ಇವೆಲ್ಲವುಗಳನ್ನು ಅಂದೇ ಬಳಸಿದ್ದಾರೆ ಎಂದರು.
ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಗಣಿತಶಾಸ್ತ್ರ ಕಬ್ಬಿಣದ ಕಡಲೆಯಲ್ಲ. ಅದು ಅತ್ಯಂತ ಸರಳವಾದದ್ದು. ಆದರೆ ಆಸಕ್ತಿ ಕೊರತೆಯಿಂದ ಗಣಿತ ಓದುವುದಿಲ್ಲ. ಗಣಿತ ಜೀವನದ ಪ್ರತಿಯೊಂದು ಸಂಗತಿಗೆ ಅವಶ್ಯಕವಾಗಿದೆ. ಶರಣರು ತಮ್ಮ ವಚನಗಳಲ್ಲಿ ಅಂಕಿ ಸಂಖ್ಯೆಗಳನ್ನು ಬಹಳಷ್ಟು ವೈಚಾರಿಕತೆಯಿಂದ ಬಳಸಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜ್ಯೋತಿ ಹುಲ್ಲೂರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಐ. ನಂದಿಕೋಲ್ಮಠ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ವಂದಿಸಿದರು. ಎಸ್.ಕೆ. ಹಿರೇಮಠ ನಿರೂಪಿಸಿದರು.