ಕೋಡಿಮಠದಲ್ಲಿ‌ ಶ್ರಾವಣಮಾಸ ಆಚರಣೆ

| Published : Aug 05 2024, 12:30 AM IST

ಸಾರಾಂಶ

ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ‌ ಆ.5ರಿಂದ ಸೆ.3ರವರೆಗೆ 2ನೇ ವರ್ಷದ ಶ್ರಾವಣ ಮಾಸದ ಶಿವಪೂಜಾ ಲಿಂಗಾನುಷ್ಠಾನ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಇವರ ಸಾನಿಧ್ಯದಲ್ಲಿ ಪೂಜಾ ಕೈಂಕರ್ಯ ಪ್ರತಿದಿನ ನಡೆಯಲಿದ್ದು, ಮಠದ ಉತ್ತರಾಧಿಕಾರಿ ಶ್ರೀ ಚೇತನ ಮರಿ ದೇವರು ಪೂಜಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಿದ್ದಾರೆ. ಮಠದ ಆವರಣದಲ್ಲಿರುವ ಶ್ರೀ ನೀಲಮಜ್ಜಯ್ಯ ಮತ್ತು ಶ್ರೀ ಶಿವಲಿಂಗಜ್ಜಯ್ಯ ಗದ್ದುಗೆಗಳಿಗೆ ಪ್ರತಿದಿನ ಅಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ‌ ಆ.5ರಿಂದ ಸೆ.3ರವರೆಗೆ 2ನೇ ವರ್ಷದ ಶ್ರಾವಣ ಮಾಸದ ಶಿವಪೂಜಾ ಲಿಂಗಾನುಷ್ಠಾನ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಇವರ ಸಾನಿಧ್ಯದಲ್ಲಿ ಪೂಜಾ ಕೈಂಕರ್ಯ ಪ್ರತಿದಿನ ನಡೆಯಲಿದ್ದು, ಮಠದ ಉತ್ತರಾಧಿಕಾರಿ ಶ್ರೀ ಚೇತನ ಮರಿ ದೇವರು ಪೂಜಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಿದ್ದಾರೆ. ಮಠದ ಆವರಣದಲ್ಲಿರುವ ಶ್ರೀ ನೀಲಮಜ್ಜಯ್ಯ ಮತ್ತು ಶ್ರೀ ಶಿವಲಿಂಗಜ್ಜಯ್ಯ ಗದ್ದುಗೆಗಳಿಗೆ ಪ್ರತಿದಿನ ಅಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ.

ಪ್ರತಿದಿನ ಸಂಜೆ ಭವ್ಯ ಸಭಾಂಗಣದಲ್ಲಿ ವಿವಿಧ ಧಾರ್ಮಿಕ‌ ಸಭೆ, ಸಮಾರಂಭಗಳು ನಡೆಯಲಿದ್ದು, ಈ ಕಾರ್ಯಕ್ರಮ ವೇದಿಕೆಯಲ್ಲಿ ಮಠಾಧೀಶರು, ಗುರುವರ್ಯರು , ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತ ವೃಂದವು ಭಾಗವಹಿಸಲಿದೆ. ಪ್ರತಿದಿನ ನಡೆಯುವ ಅನ್ನದಾಸೋಹವು ಎಂ.ಎಸ್ ನಾಗೇಂದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್ ಸಿದ್ದೇಶ್ ನಾಗೇಂದ್ರ ಕುಮಾರ್ ಕುಟುಂಬ ನೆರವೇರಿಸಿಕೊಡಲಿದ್ದು, ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಲಿದ್ದಾರೆ. ಶ್ರೀಕ್ಷೇತ್ರದ ಸುತ್ತಮುತ್ತಲಿನ ಗ್ರಾಮಸ್ಥರ ನೇತೃತ್ವದಲ್ಲಿ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರಕಟಣೆ ತಿಳಿಸಿದೆ.