ಸಾರಾಂಶ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 4292 ಷೇರುದಾರರಿದ್ದು, ಸಂಘದಲ್ಲಿ ಕ್ರಿಮಿನಾಶಕ, ರಸಗೊಬ್ಬರ, ಪಶುಆಹಾರ, ಬ್ಯಾಂಕಿಂಗ್ ಶಾಖೆ, ಹಾರ್ಡ್‌ವೇರ್ ಶಾಖೆ, ಔಷಧಿ ಅಂಗಡಿ, ಇ- ಸ್ಟ್ಯಾಂಪ್ ಶಾಖೆ ವ್ಯವಹಾರ ನಡೆಯುತ್ತಿದೆ. ಜಿಲ್ಲೆಯಲ್ಲಿ ನಂ.1 ಸಂಘವಾಗಿ ಅಭಿವೃದ್ಧಿ ಹೊಂದಲು ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜೀವಾಳವಾಗಿರುವ ಷೇರುದಾರರಿಂದ ಸಂಘ ಪ್ರಸಕ್ತ ವರ್ಷ 47.27 ಲಕ್ಷ ರು.ಲಾಭಾಂಶ ಪಡೆದಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.ಪಟ್ಟಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದಲ್ಲಿ 4292 ಷೇರುದಾರರಿದ್ದು, ಸಂಘದಲ್ಲಿ ಕ್ರಿಮಿನಾಶಕ, ರಸಗೊಬ್ಬರ, ಪಶುಆಹಾರ, ಬ್ಯಾಂಕಿಂಗ್ ಶಾಖೆ, ಹಾರ್ಡ್‌ವೇರ್ ಶಾಖೆ, ಔಷಧಿ ಅಂಗಡಿ, ಇ- ಸ್ಟ್ಯಾಂಪ್ ಶಾಖೆ ವ್ಯವಹಾರ ನಡೆಯುತ್ತಿದೆ. ಜಿಲ್ಲೆಯಲ್ಲಿ ನಂ.1 ಸಂಘವಾಗಿ ಅಭಿವೃದ್ಧಿ ಹೊಂದಲು ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಬೇಕು ಎಂದು ವಿನಂತಿಸಿದರು.
ಸಿಇಒ ಕೆ.ಆರ್.ಪುಟ್ಟರಾಜು ಮಾತನಾಡಿ, ಅಲ್ಪಾವಧಿ ಬೆಳೆ ಸಾಲ 9.45ಕೋಟಿ ರು, ಆಭರಣ ಸಾಲ 9.26ಕೋಟಿ ರು. ಸೇರಿದಂತೆ ವ್ಯಾಪಾರ ಅಭಿವೃದ್ಧಿ ಸಾಲ, ಠೇವಣಿ ಮೇಲಿನ ಸಾಲ, ಆರ್‌ಡಿ ಮೇಲಿನ ಸಾಲ ಸೇರಿದಂತೆ 20 ಕೋಟಿ ರು.ಸಾಲ ನೀಡಲಾಗಿದೆ ಎಂದರು.ಸಂಘದ ಠೇವಣಿಯನ್ನು ಎಂಡಿಸಿಸಿ ಬ್ಯಾಂಕ್‌ನಲ್ಲಿ ಆಪತ್ ಧನವಾಗಿ 2.75 ಕೋಟಿ ರು, ಧೀರ್ಘಾವಧಿ ಠೇವಣಿ 3.86 ಕೋಟಿ ರು, ಎಫ್‌ಡಿ 50 ಲಕ್ಷ ರು.ಇಡಲಾಗಿದೆ. ಷೇರಿನ ಡಿವಿಡೆಂಟ್ ಹಣವನ್ನು ಸಮುದಾಯ ಭವನ ನಿರ್ಮಾಣಕ್ಕೆ ಬಳಸಿಕೊಂಡು ಷೇರುದಾರರಿಗೆ ರಿಯಾಯಿತಿ ದರದಲ್ಲಿ ಭವನದ ಬಾಡಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಹರೀಶ್‌ನಾಯಕ್, ನಿರ್ದೇಶಕರಾದ ಎಂ.ಕೆ.ಶ್ರೀನಾಥ್, ಡಿ. ತಾರಾನಾಥ್, ಮುರಳೀಧರ್, ಪಾಪೇಗೌಡ, ಶಿವರಾಮಯ್ಯ, ಸಿದ್ದಿಖ್ ಪಾಷ, ಸಾಸಲು ಈರಪ್ಪ, ಹರೀಶ್, ಕೋಮಲ ಪುಟ್ಟೇಗೌಡ, ಭಾರತಿ ಪ್ರಕಾಸ್, ಉಪ ವ್ಯವಸ್ಥಾಪಕಿ ಭಾರತಿ, ಸಿಬ್ಬಂದಿ ನರಸಿಂಹ, ಬಾಬು, ಮಲ್ಲಿಕ, ವೆಂಕಟೇಶ್, ಸುಮಿತ್ರ, ಕೆ.ಆರ್.ಶೋಭಾ, ಮಮತಾ, ಆಶಾ ಮತ್ತಿತರರು ಉಪಸ್ಥಿತರಿದ್ದರು.