ಸಾರಾಂಶ
ಶರೋನ್ ನಗರ ಪೂರ್ಣಪ್ರಜ್ಞಾ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಮತ್ತು ಅಲೋಶಿಯಸ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಸರ್ವಿಸ್‌ನಲ್ಲಿ ಓದುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ ಜಿಲ್ಲೆ 317ಸಿ ಯ 2024 -25ನೇ ಸಾಲಿನ ಜಿಲ್ಲಾ ಲಿಯೊ ಅಧ್ಯಕ್ಷೆಯಾಗಿ ಶಾರೋನ್ ನಾಬೆಲ್, ಇತ್ತೀಚೆಗೆ ನಡೆದ ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನಲಿಯೋ ಅವರ ಜಿಲ್ಲಾ ಸಮ್ಮೇಳನದಲ್ಲಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವಿಖ್ಯಾತ್ ಶೆಟ್ಟಿ, ಖಜಾಂಚಿಯಾಗಿ ಅನಿಕಾ ರೈ ಆಯ್ಕೆ ಆಗಿದ್ದಾರೆ.
ಶರೋನ್ ನಗರ ಪೂರ್ಣಪ್ರಜ್ಞಾ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಮತ್ತು ಅಲೋಶಿಯಸ್ ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಸರ್ವಿಸ್‌ನಲ್ಲಿ ಓದುತ್ತಿದ್ದಾರೆ.ಈಕೆ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಾಲೇಜಿನ ಲಿಂಗ ಸಮಾನತೆ ಕ್ಲಬ್ ಕಾರ್ಯದರ್ಶಿ, ರಾಷ್ಟ್ರೀಯ ಮಟ್ಟದ ಕಲಾವಿದೆ, ನವದೆಹಲಿಯಲ್ಲಿ 2022ರಲ್ಲಿ ಗಣರಾಜ್ಯೋತ್ಸವ ಪರೇಡ್ ಭಾಗವಹಿಸಿದ್ದಾರೆ. ಎನ್‌ಸಿಸಿಯ ಜೆಯುಒ ಆಗಿದ್ದು, ಬೆಂಗಳೂರಿನಲ್ಲಿ ನಡೆದ ರೈಫಲ್ ಡ್ರಿಲ್ ಪ್ರಿ-ಆರ್‌ಡಿಸಿ ಕೆಡೆಟ್ ಮತ್ತು ಭಾರತೀಯ ಅಂತಾರಾಷ್ಟ್ರೀಯ ಮಾದರಿ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿಯೂ ಭಾಗವಹಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ದುಶ್ಚಟ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ, ಉಡುಪಿಯ ಹೊರಜಿಲ್ಲೆಗಳ ಕೂಲಿ ಕಾರ್ಮಿಕರು ವಾಸಿಸುವ ಕೇರಿಗಳಿಗೆ ಹೋಗಿ ಅವರ ಮಕ್ಕಳಲ್ಲಿ ಶಿಕ್ಷಣ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಲಯನ್ ಜಿಲ್ಲಾ ಮಾಜಿ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ಅವರು ಇವರ ಮಾರ್ಗದರ್ಶಕರಾಗಿದ್ದಾರೆ ಎಂದು 2024-25ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಲ. ಮೊಹಮ್ಮದ್ ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.;Resize=(128,128))
;Resize=(128,128))