ಸಾರಾಂಶ
ಬಾಗಲಕೋಟೆ: ವಿಪ್ರ ಸಮಾಜದ ಹಿರಿಯರು, ಶತಾಯುಷಿ ಪಂ.ವೈಶಂಪಾಯನಾಚಾರ್ಯ ನಾಗಸಂಪಿಗೆ (100) ಶನಿವಾರ ನಿಧನರಾದರು.
ಬಾಗಲಕೋಟೆ: ವಿಪ್ರ ಸಮಾಜದ ಹಿರಿಯರು, ಶತಾಯುಷಿ ಪಂ.ವೈಶಂಪಾಯನಾಚಾರ್ಯ ನಾಗಸಂಪಿಗೆ (100) ಶನಿವಾರ ನಿಧನರಾದರು.
ಮೃತರು ಪುತ್ರರಾದ ಪಂ.ಆನಂದತೀರ್ಥಾಚಾರ್ಯ, ಪಂ.ರಘೋತ್ತಮಾಚಾರ್ಯ, ಪಂ.ಬಿಂದುಮಾಧವಾಚಾರ್ಯ, ಪಂ.ವಿಜಯೇಂದ್ರಚಾರ್ಯ, ಪುತ್ರಿ ಪರಿಮಳಾ ಕಡಿವಾಲ ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಪಂ.ವೈಶಂಪಾಯನಾಚಾರ್ಯರ ನಿಧನಕ್ಕೆ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು,, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು, ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಮಠದ ಶ್ರೀಸುಬುಧೇಂದ್ರತೀರ್ಥ ಶ್ರೀಗಳು, ಭಂಡಾರಕೇರಿಮಠದ ಶ್ರೀ ವಿದ್ಯೇಶತೀರ್ಥ ಶ್ರೀಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.