ಶೆಡ್‌ಗೆ ಬೆಂಕಿ: ಮೃತರ ಮನೆ ಮುಂದೆ ಸಾಕು ನಾಯಿ ವೇದನೆ

| Published : Jul 20 2024, 12:52 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪವಿರುವ ಪೆಂಡಾರಿ ತೋಟದಲ್ಲಿ ಮಂಗಳವಾರ (ಜು.16) ನಡೆದ ಹತ್ಯಾಕಾಂಡದಲ್ಲಿ ಮೃತರಾದ ಮನೆ ಮಾಲೀಕರ ಉಪಕಾರ ಸ್ಮರಣೆ ಮಾಡುತ್ತಾ ಅವರ ಶ್ವಾನ ನಿರಾಹಾರಿಯಾಗಿ ಯಾರೂ ಇಲ್ಲದ ಮನೆ ಮುಂದೆ ರೋದಿಸುತ್ತಾ ಮಲಗಿ ಅವರ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಮನ ಕಲಕುವಂತಿದೆ.

ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪವಿರುವ ಪೆಂಡಾರಿ ತೋಟದಲ್ಲಿ ಮಂಗಳವಾರ (ಜು.16) ನಡೆದ ಹತ್ಯಾಕಾಂಡದಲ್ಲಿ ಮೃತರಾದ ಮನೆ ಮಾಲೀಕರ ಉಪಕಾರ ಸ್ಮರಣೆ ಮಾಡುತ್ತಾ ಅವರ ಶ್ವಾನ ನಿರಾಹಾರಿಯಾಗಿ ಯಾರೂ ಇಲ್ಲದ ಮನೆ ಮುಂದೆ ರೋದಿಸುತ್ತಾ ಮಲಗಿ ಅವರ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಮನ ಕಲಕುವಂತಿದೆ.

ಮನೆಯಲ್ಲಿ ಆಸರೆಕೊಟ್ಟ ಮನೆ ಸದಸ್ಯರು ಬೆಂಕಿಯಲ್ಲಿ ಸುಡುವುದನ್ನು ಕಣ್ಣಾರೆ ಕಂಡು ಅದು ಕೂಡ ಆಘಾತಕ್ಕೆ ಒಳಗಾದಂತೆ ಕಾಣುತ್ತಿದೆ. ಪೆಂಡಾರಿ ಕುಟುಂಬ ಹಲವಾರು ವರ್ಷಗಳಿಂದ ಶ್ವಾನವನ್ನು ತಮ್ಮ ಪರಿವಾರದ ಸದಸ್ಯನಂತೆಯೇ ಕಂಡಿದ್ದಾರೆ. ಈ ಕಾರಣದಿಂದಲೇ ಮನೆ ಒಡೆಯರ ಉಪಕಾರಕ್ಕೆ ಪ್ರತಿಯಾಗಿ ಅವರನ್ನು ಕಳೆದುಕೊಂಡು ರೋದಿಸುತ್ತಿದೆ.