ಲಕ್ಕವಳ್ಳಿ ಗ್ರಾಮದಲ್ಲಿ ಕುರಿ ಕಾಳಗ

| Published : May 07 2024, 01:01 AM IST

ಸಾರಾಂಶ

ತರೀಕೆರೆ, ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರೋತ್ಸವ ಪ್ರಯುಕ್ತ ಕುರುಬ ಸಮಾಜದವರಿಂದ ಭಾನುವಾರ ಸರ್ಕಾರಿ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಕುರಿ ಕಾಳಗ ಸ್ಪರ್ಧೆ ಆಯೋಜಿಸಲಾಗಿತ್ತು.

ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರೋತ್ಸವ ಪ್ರಯುಕ್ತ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರೋತ್ಸವ ಪ್ರಯುಕ್ತ ಕುರುಬ ಸಮಾಜದವರಿಂದ ಭಾನುವಾರ ಸರ್ಕಾರಿ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಕುರಿ ಕಾಳಗ ಸ್ಪರ್ಧೆ ಆಯೋಜಿಸಲಾಗಿತ್ತು. ಕುರುಬ ಸಮಾಜದ ಮುಖಂಡ ರಂಜಿತ್ ಕುರಿಕಾಳಗ ಸ್ಪರ್ಧೆ ಉದ್ಘಾಟನೆ ನೆರವೇರಿಸಿದರು. ಗ್ರಾಮ ಜ್ಯೋತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸಂಜೀವ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಫಣಿರಾಜ್ ಜೈನ್, ಸತೀಶ್, ಎಲ್.ಆರ್. ರಾಜೇಶ್, ಎಲ್.ಟಿ.ಹೇಮಣ್ಣ ಮತ್ತು ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಕ್ರೀಡೆಯಲ್ಲಿ ರಾಜ್ಯದ ತರೀಕೆರೆ, ಸಾಗರ, ಹೊನ್ನಾಳಿ, ಕೊಪ್ಪಳ, ದಾವಣಗೆರೆ , ಭದ್ರಾವತಿ ಹಾಗೂ ಹರಿಹರ ತಾಲೂಕುಗಳಿಂದ ಜಬರ್ ದಸ್ತ್ ಕುರಿ ಕಾಳಗದಲ್ಲಿ ಪಾಲ್ಗೊಳ್ಳಲು ನೂರಾರು ಕುರಿಗಳು ಮತ್ತು ಅದರ ಮಾಲೀಕರು ಭಾಗವಹಿಸಿದ್ದರು.ಕುರಿ ಕಾಳಗ ಸ್ಪರ್ಧೆಯಲ್ಲಿ ತರೀಕೆರೆ ದುರ್ಗಿ ಹಳಿಯೂರು ಪ್ರಥಮ ಬಹುಮಾನ, ರೋಬರ್ಟ್ ಶಿವಮೊಗ್ಗ ದ್ವಿತೀಯ ಬಹುಮಾನ ಗಳಿಸಿದರು.ಕಾಳಗವನ್ನು ವಿಕ್ಷೀಸಲು ಗ್ರಾಮದ ಸುತ್ತಮುತ್ತ ಹಳ್ಳಿಯಿಂದ ಸಾವಿರಾರು ಮಂದಿ ನೆರೆದಿದ್ದರು ಎಂದು ಜಾತ್ರೆ ಉತ್ಸವ ಸಮಿತಿಯಿಂದ ಪತ್ರಿಕಾ ಪ್ರಕಟಣೆ ತಿಳಿಸಿದೆ.

6ಕೆಟಿಆರ್.ಕೆಃ 6ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಲಕ್ಕವಳ್ಳಿ ಗ್ರಾಮದಲ್ಲಿ ಕುರಿ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು.