ಸುರಪುರ : ಬೀದಿನಾಯಿಗಳ ದಾಳಿ: 15 ಕುರಿಗಳು

| Published : Jul 05 2024, 12:55 AM IST / Updated: Jul 05 2024, 01:05 PM IST

ಸಾರಾಂಶ

ತಾಲೂಕಿನ ಕೆಂಭಾವಿ ಪಟ್ಟಣದ ಮಾಲಗತ್ತಿ ಗ್ರಾಮದ ಸಂಜೀವಪ್ಪ ದೇವಾಪುರ ಅವರಿಗೆ ಸೇರಿದ 15 ಕುರಿ ಮರಿಗಳನ್ನು ಬೀದಿ ನಾಯಿಗಳು ಕೊಂದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಸಂಜೀವಪ್ಪ ಅವರು ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದರು./

ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಮಾಲಗತ್ತಿ ಗ್ರಾಮದ ಸಂಜೀವಪ್ಪ ದೇವಾಪುರ ಅವರಿಗೆ ಸೇರಿದ 15 ಕುರಿ ಮರಿಗಳನ್ನು ಬೀದಿ ನಾಯಿಗಳು ಕೊಂದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಸಂಜೀವಪ್ಪ ಅವರು ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದರು. 

ಅದಕ್ಕಾಗಿ ತಮ್ಮಲ್ಲಿದ್ದ ಎಲ್ಲ ಹಣವನ್ನು ಹೂಡಿಕೆ ಮಾಡಿದ್ದರು. ಈಚೆಗೆ ಬೀದಿ ನಾಯಿಗಳ ಹಾವಳಿ ಗ್ರಾಮದಲ್ಲಿ ಹೆಚ್ಚಾಗಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 

ಮುಂಚೆಯೂ ಬೀದಿ ನಾಯಿಗಳು ಒಂದೆರೆಡು ಮರಿಗಳನ್ನು ಕೊಂದಿದ್ದವು. ಆದರೆ, ಸೋಮವಾರ ಸಂಜೆ ಏಕಾಏಕಿ ನಾಯಿಗಳು ದಾಳಿ ಮಾಡಿ ಸುಮಾರು 15 ಮರಿಗಳನ್ನು ಕೊಂದು ಹಾಕಿವೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ ಎಂದು ಸಂಜೀವಪ್ಪ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯವರು ಈ ಕುರಿತು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರ ನಮಗೆ ಪರಿಹಾರ ದೊರಕಿಸಿ ಕೊಡಬೇಕು. ನಮ್ಮ ಜೀವನ ಕುರಿ ಸಾಕಾಣಿಕೆ ಮೇಲೆಯೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.