ಸಾರಾಂಶ
ನರಗುಂದ: ಕುರಿಗಾಹಿ ಗೊಲ್ಲಾಳೇಶ ಶ್ರೀಶೈಲದಿಂದ ಲಿಂಗ ತರುವಂತೆ ನಂದಯ್ಯನವರನ್ನು ಕೇಳಿದ, ನಂದಯ್ಯನವರು ಕುರಿ ಹಿಕ್ಕಿ ನೀಡಿ ಪೂಜಿಸು ಎಂದರು ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ನೂತನ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಕಳಶಾರೋಹಣ ನಿಮಿತ್ತ 23ನೇ ದಿನ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.ನಿದ್ರಾಹಾರಗಳನ್ನು ತ್ಯಜಿಸಿ, ತಂದೆಯ ಕೋಪಕ್ಕೆ ಗುರಿಯಾಗಿ, ಲಿಂಗ ಪೂಜೆಯಲ್ಲಿ ನಿರತನಾದ ಗೊಲ್ಲಾಳೇಶ ಶಿವನೊಲುಮೆ ಪಡೆಯುತ್ತಾನೆ. ಶಿವಪೂಜೆಯಿಂದ ಗುರುತಿಸಿಕೊಂಡ ಕುರಬ ಗೊಲ್ಲಾಳೇಶ ಕುರಿಹಿಕ್ಕಿಯಲ್ಲಿ ಲಿಂಗ ಕಾಣುತ್ತಾನೆ ಎಂದರು. ಪುರುಷ ಬಲದಿಂದ ಅವಲೋಹದ ಕೇಡು ನೋಡಯ್ಯ ಎನ್ನುವಂತೆ ಕಳ್ಳತನ ಮಾಡಿ ಬದುಕುತ್ತಿದ್ದ ಉರಿಲಿಂಗ ಪೆದ್ದಿ, ಗುರುವಿನ ಸಾಕ್ಷಾತ್ಕಾರದಿಂದ ಶರಣರಾಗಿ ಬದಲಾಗುತ್ತಾರೆ. ಮನುಷ್ಯ ತನ್ನ ಶಕ್ತಿಯನ್ನು ಸದುಪಯೋಗ ಪಡಿಸಿಕೊಂಡರೆ ಮಹಾತ್ಮನಾಗಲು ಸಾಧ್ಯ ಎಂದು ಶರಣರು ತೋರಿಸಿಕೊಟ್ಟಿದ್ದಾರೆ. ವಚನ ಸಾಹಿತ್ಯದಲ್ಲಿ ಜಾತಿ-ಮತ, ಮೇಲು-ಕೀಳು, ಬಡವ-ಬಲ್ಲಿದ ಭೇದವಿಲ್ಲ, ಅನಿಷ್ಟ ಕಂದಾಚಾರಗಳಿಗೆ ಅವಕಾಶವಿಲ್ಲ ಎಂದರು. ಶಿರೋಳದ ಬೀರಲಿಂಗೇಶ್ವರ ಓಣಿಯ ಬಸವ ಭಕ್ತಾಧಿಗಳು ಬಸವ ಬುತ್ತಿ ಪ್ರಸಾದ ಸೇವೆ ಮಾಡಿದರು. ದಾಸೋಹ ದಾನಿಗಳಾದ ದ್ಯಾಮಣ್ಣ ಕಾಡಪ್ಪನವರ, ದ್ಯಾವಪ್ಪ ಕಾಡಪ್ಪನವರ, ಮುರಗಯ್ಯ ವಸ್ತ್ರದ, ಎಂ.ಎಸ್. ಹಳ್ಳೂರ, ಕಾಳವ್ವ ಬನ್ನಿಗಿಡದ, ರಮೇಶ ಪೂಜಾರ, ಸಂಗಪ್ಪ ಚವಡಿವರನ್ನು ಶ್ರೀ ಮಠದಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡಮನಿ, ನಾಗನಗೌಡ ತಿಮ್ಮನಗೌಡ್ರ, ಗುರುಬಸವ ಶೆಲ್ಲಿಕೇರಿ, ಶಿವಾನಂದ ಯಲಿಬಳ್ಳಿ, ಗುರಬಸಯ್ಯ ನಾಗಲೊಟಿಮಠ, ಲೋಕಪ್ಪ ಕರಕೀಕಟ್ಟಿ, ಬಸಣ್ಣ ಕುಪ್ಪಸ್ತ, ಪ್ರಭಾಕರ ಉಳ್ಳಾಗಡ್ಡಿ, ಬಾಪುಗೌಡ ತಿಮ್ಮನಗೌಡ್ರ, ಸುರೇಶ ಬನ್ನಿಗಿಡದ, ಮಲ್ಲಪ್ಪ ಕುಪ್ಪಸ್ತ, ಜಗದೀಶ ವಸ್ತ್ರದ, ಮುತ್ತಪ್ಪ ಜೋರಲ, ಶರಣಪ್ಪಗೌಡ ತಿರಕನಗೌಡ್ರ, ದ್ಯಾಮಣ್ಣ ಶಾಂತಗೇರಿ, ಇದ್ದರು.