ಕುಂದರನಾಡಿನ ಮಠಾಧೀಶರ ಆಶೀರ್ವಾದ ಪಡೆದ ಶೆಟ್ಟರ್‌

| Published : Apr 02 2024, 01:05 AM IST

ಸಾರಾಂಶ

ಗೋಕಾಕ: ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಗೋಕಾಕ ವಿಧಾನಸಭಾ ಕ್ಷೇತ್ರದ ದೇವಸ್ಥಾನಗಳು, ವಿವಿಧ ಮಠಾಧೀಶರನ್ನು ಭಾನುವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಗೋಕಾಕ: ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಗೋಕಾಕ ವಿಧಾನಸಭಾ ಕ್ಷೇತ್ರದ ದೇವಸ್ಥಾನಗಳು, ವಿವಿಧ ಮಠಾಧೀಶರನ್ನು ಭಾನುವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.

ಅಂಕಲಗಿ ಹಾಗೂ ಕುಂದರಗಿಯ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ, ಹುಲಿಕಟ್ಟಿಯ ಶಿವಲಿಂಗೇಶ್ವರ ಸ್ವಾಮೀಜಿ, ಮಮದಾಪುರದ ಚರಮೂರ್ತೇಶ್ವರ ಸ್ವಾಮೀಜಿ, ಸಾವಳಗಿಯ ಶಿವಲಿಂಗೇಶ್ವರ ಮಠದ ಕುಮಾರೇಂದ್ರ ಸ್ವಾಮೀಜಿ, ಮಲ್ಲಾಪುರ ಪಿಜಿಯ ಗುಬ್ಬಲಗುಡ್ಡದ ಮಲ್ಲಿಕಾರ್ಜು ಸ್ವಾಮೀಜಿ, ಕರ್ಪೂರಮಠದ ವಿರೂಪಾಕ್ಷ ಸ್ವಾಮೀಜಿ, ಮರಡಿಮಠದ ಪವಾಡೇಶ್ವರ ಸ್ವಾಮೀಜಿ, ನಗರದ ಶೂನ್ಯಸಂಪಾದನ ಮಠ ಮುರುಘರಾಜೇಂದ್ರ ಸ್ವಾಮೀಜಿ, ಮುಪ್ಪಯ್ಯನ ಮಠದ ರಾಚೋಟೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ ಶ್ರೀಗಳನ್ನು ಸತ್ಕರಿಸಿದರು.ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳ ಪ್ರಮುಖರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಂ.ಎಲ್. ಮುತ್ತೇನ್ನವರ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಒಡೆಯರ, ಮುಖಂಡರಾದ ಕಿರಣ ಜಾಧವ, ಟಿ.ಆರ್. ಕಾಗಲ, ಮಡ್ಡೆಪ್ಪ ತೋಳಿನವರ, ಭೀಮಗೌಡ ಪೋಲಿಸಗೌಡ್ರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಹನುಮಂತ ದುರ್ಗನ್ನವರ, ಲಕ್ಷ್ಮಣ ತಪಸಿ, ಪ್ರಮೋದ ಜೋಶಿ, ಸುರೇಶ ಕಾಡದವರ, ಪುಂಡಲೀಕ ವಣ್ಣೂರ, ಅಡಿವೆಪ್ಪ ನಾವಲಗಟ್ಟಿ, ವಿರೂಪಾಕ್ಷ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಶಂಕರ ಬೂಶನ್ನವರ, ಸುನೀಲ ನಾಯ್ಕ, ಶಿವು ಪಾಟೀಲ, ಕೆಂಪಣ್ಣ ಪಾಟೀಲ, ಅಶೋಕ ಗೋಣಿ, ಅಶೋಕ ಹುಲಿಕಟ್ಟಿ, ರಂಗಪ್ಪ ನಂದಿ, ಬಾಳಯ್ಯ ಅಜ್ಜನವರ, ಸಿದ್ದಪ್ಪ ಆಡಿನ, ಶಂಕರಗೌಡ ಪಾಟೀಲ, ಸುರೇಶ ಪಾಟೀಲ, ರಾಮಣ್ಣ ಹುಕ್ಕೇರಿ, ಪ್ರಕಾಶ ಕರನಿಂಗ, ಧರೆಪ್ಪ ಮಗದುಮ್ಮ, ರಮೇಶ ಚಿಕ್ಕೋಡಿ ಸೇರಿದಂತೆ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳ ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು.