ವಿದ್ಯಾ ಭಾರತಿ, ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ಸಹಯೋಗದೊಂದಿಗೆ ಶಿಮಂತೂರು ಶ್ರೀ ಶಾರದಾ ಶಾಲಾ ಮುಖ್ಯ ಸಭಾಂಗಣದಲ್ಲಿ ವಂದೇ ಮಾತರಂ ಗೀತೆಯ 150 ವರ್ಷಗಳ ಪೂರ್ಣತೆಯ ಅಂಗವಾಗಿ ನಮಾಮಿ ಭಾರತಂ – ವಂದೇ ಮಾತರಂ ರಾಷ್ಟ್ರವ್ಯಾಪಿ ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಯಿತು.

ಮೂಲ್ಕಿ: ವಿದ್ಯಾ ಭಾರತಿ, ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ಸಹಯೋಗದೊಂದಿಗೆ ಶಿಮಂತೂರು ಶ್ರೀ ಶಾರದಾ ಶಾಲಾ ಮುಖ್ಯ ಸಭಾಂಗಣದಲ್ಲಿ ವಂದೇ ಮಾತರಂ ಗೀತೆಯ 150 ವರ್ಷಗಳ ಪೂರ್ಣತೆಯ ಅಂಗವಾಗಿ ನಮಾಮಿ ಭಾರತಂ – ವಂದೇ ಮಾತರಂ ರಾಷ್ಟ್ರವ್ಯಾಪಿ ಸಾಮೂಹಿಕ ಗಾಯನ ಕಾರ್ಯಕ್ರಮ ನಡೆಯಿತು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ ವಂದೇ ಮಾತರಂ ಗೀತೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಾಂಶುಪಾಲ ಜಿತೇಂದ್ರ ವಿ. ರಾವ್, ಸಹ ಶಿಕ್ಷಕಿಯರಾದ ಕಾಂತಿ ಶೆಟ್ಟಿ, ದೀಕ್ಷಿತಾ, ಸಂಧ್ಯಾ, ಹೇಮಲತಾ, ಸೌಮ್ಯ, ನಿಶ್ಮಿತಾ, ಶ್ರೀವಿದ್ಯಾ ಉಪಾಧ್ಯಾಯ, ದೀಪಿಕಾ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.