ಶಿಮಂತೂರು: ಲೋಕಕಲ್ಯಾಣಾರ್ಥ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ

| Published : Aug 18 2024, 01:51 AM IST

ಶಿಮಂತೂರು: ಲೋಕಕಲ್ಯಾಣಾರ್ಥ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 8 ಗಂಟೆಗೆ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಲಕ್ಷ ತುಳಸಿ ಅರ್ಚನೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಶಿಮಂತೂರು ಆದಿ ಜನಾರ್ದನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶನಿವಾರ ಸಿಂಹ ಸಂಕ್ರಮಣದ ಶುಭದಿನದಂದು ಶ್ರೀ ಆದಿ ಜನಾರ್ದನ ದೇವರಿಗೆ ‘ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ’ ನಡೆಯಿತು.

ಬೆಳಗ್ಗೆ 8 ಗಂಟೆಗೆ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಲಕ್ಷ ತುಳಸಿ ಅರ್ಚನೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು .

ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕರುಣಾಕರ ಶೆಟ್ಟಿ ಶಿಮಂತೂರು ಬಾವ, ಪ್ರಸಾದ್ ಶೆಟ್ಟಿ ಮುಂಬೈ, ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯರಾದ ಪದ್ಮಿನಿ ವಿಜಯ್ ಕುಮಾರ್, ಮಮತಾ ಶೆಟ್ಟಿ, ಆಡಳಿತಾಧಿಕಾರಿ ಇಂದು ಎಂ., ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಸದಸ್ಯರಾದ ಚಂದ್ರಹಾಸ ಸುವರ್ಣ, ಎಸ್.ಎಚ್.ವಿಶ್ವನಾಥ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಕಲ್ಪನಾ ಬಲ್ಲಾಳ್‌ ಮತ್ತಿತರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.