ಶಿವಮೊಗ್ಗ ದಸರಾ: ನಾಳೆ ಉಚಿತ ಆರೋಗ್ಯ ತಪಾಸಣೆ
KannadaprabhaNewsNetwork | Published : Oct 21 2023, 12:30 AM IST
ಶಿವಮೊಗ್ಗ ದಸರಾ: ನಾಳೆ ಉಚಿತ ಆರೋಗ್ಯ ತಪಾಸಣೆ
ಸಾರಾಂಶ
6.45ರಿಂದ 7 ಗಂಟೆವರೆಗೆ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ ಧ್ಯಾನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾ ಅಂಗವಾಗಿ ಯೋಗ ದಸರಾ ವತಿಯಿಂದ ಅ.22ರಂದು ಕುವೆಂಪು ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷೆ ಕಲ್ಪನಾ ರಮೇಶ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.22ರಂದು ಕುವೆಂಪು ರಂಗಮಂದಿರದಲ್ಲಿ ಬೆಳಗಿನ ಜಾವ 5.30ಕ್ಕೆ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಆರಂಭ ಆಗುತ್ತದೆ. 6.45ರಿಂದ 7 ಗಂಟೆವರೆಗೆ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ ಧ್ಯಾನ ನಡೆಯುತ್ತದೆ. ಅನಂತರ ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ ನಾಯಕ್, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಆಯುಕ್ತ ಕೆ. ಮಾಯಣ್ಣ ಗೌಡ, ಹಿರಿಯ ವೈದ್ಯರಾದ ಡಾ. ಎಲ್.ಎನ್. ನಾಯಕ್, ಯೋಗ ಶಿಕ್ಷಕ ಡಾ.ಭ.ಮ. ಶ್ರೀಕಂಠ, ಯೋಗಾಚಾರ್ಯ ಸಿ.ವಿ ರುದ್ರಾರಾಧ್ಯ, ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ.ರಾಜಶೇಖರ್, ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ರೋಹಿಣಿ ಎಂ. ಪಾಟೀಲ್ ಉಪಸ್ಥಿತರಿರುವರು ಎಂದರು. ಸಾವಯವ ಕೃಷಿಕ ಆಹಾರ ತಜ್ಣ ಆ.ಶ್ರೀ. ಆನಂದ್ ಅವರಿಂದ ಆರೋಗ್ಯ, ಆಹಾರ, ಆನಂದ ಕುರಿತು ಉಪನ್ಯಾಸ, ವಿಶೇಷ ಯೋಗ ನೃತ್ಯ, ಯೋಗ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿವೆ. ಇಂಡಿಯನ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂದು ಬೆಳಗ್ಗೆ 5.30 ರಿಂದ 9 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ವಿವಿಧ ಚಿಕಿತ್ಸೆ ಮತ್ತು ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ ಇರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್ ಇದ್ದರು. - - - -20ಎಸ್ಎಂಜಿಕೆಪಿ05: ಕಲ್ಪನಾ ರಮೇಶ್