ಶಿರಾ ನಗರಸಭೆ ಪೌರಾಯುಕ್ತರ ದಾಳಿ 200 ಕೆಜಿ ಪ್ಲಾಸ್ಟಿಕ್ ಕೈಚೀಲ ವಶ

| Published : Apr 27 2025, 01:32 AM IST

ಶಿರಾ ನಗರಸಭೆ ಪೌರಾಯುಕ್ತರ ದಾಳಿ 200 ಕೆಜಿ ಪ್ಲಾಸ್ಟಿಕ್ ಕೈಚೀಲ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಾಯುಕ್ತ ರುದ್ರೇಶ್ ಅವರು ಸಾರ್ವಜನಿಕರು ಜಾತ್ರೆ, ಹಬ್ಬ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮಗಳಿಗೆ ಊಟ ಬಡಿಸಲು ಬಳಸುವ ಪ್ಲಾಸ್ಟಿಕ್ ಲೇಪಿತ ಎಲೆಗಳಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಬರುವ ಸಾಧ್ಯತೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಶಿರಾ

ನಗರದ ಬಾಲಾಜಿ ನಗರದ ರಸ್ತೆಯಲ್ಲಿರುವ ದಿನಸಿ ಅಂಗಡಿಗಳಲ್ಲಿದ್ದ 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟದ ಸುಮಾರು 200 ಕೆ.ಜಿಗಿಂತ ಹೆಚ್ಚು ಪ್ಲಾಸ್ಟಿಕ್ ಕೈಚೀಲಗಳನ್ನು ನಗರಸಭೆ ಪೌರಾಯುಕ್ತರಾದ ರುದ್ರೇಶ್ ಕೆ. ಹಾಗೂ ನೌಕರರ ತಂಡ ಶನಿವಾರ ದಾಳಿ ಮಾಡಿ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡರು.ನಂತರ ಮಾತನಾಡಿದ ಪೌರಾಯುಕ್ತ ರುದ್ರೇಶ್ ಅವರು ಸಾರ್ವಜನಿಕರು ಜಾತ್ರೆ, ಹಬ್ಬ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮಗಳಿಗೆ ಊಟ ಬಡಿಸಲು ಬಳಸುವ ಪ್ಲಾಸ್ಟಿಕ್ ಲೇಪಿತ ಎಲೆಗಳಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಬರುವ ಸಾಧ್ಯತೆ ಇದೆ. ಪಾನಿಪುರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳಲ್ಲಿ ನೀಡುವ ಆಹಾರದಿಂದಲೂ ಹಲವು ರೋಗಗಳು ಬರುತ್ತವೆ. ಆದ್ದರಿಂದ ಇದನ್ನು ಯಾರೂ ಸಹ ಉಪಯೋಗಿಸಬಾರದು. ಪ್ಲಾಸ್ಟಿಕ್ ವಸ್ತುಗಳು ಕೊಳೆಯುವುದಿಲ್ಲ. ಇದರಿಂದ ವಾತಾವರಣದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ದೇಶದಾದ್ಯಂತ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಹೋಟೆಲ್, ದಿನಸಿ ಅಂಗಡಿಗಳ, ತರಕಾರಿ ಮಾರಾಟಗಾರರು ಸಂಪೂರ್ಣವಾಗಿ ಪ್ಲಾಸ್ಟಿಕ್ ಕೈಚೀಲಗಳನ್ನು ನಿಷೇಧ ಮಾಡಬೇಕು. ಗ್ರಾಹಕರಿಗೆ ತಮ್ಮ ಮನೆಯಿಂದಲೇ ಬಟ್ಟೆಯ ಕೈಚೀಲವನ್ನು ತರುವಂತೆ ಮನವಿ ಮಾಡಬೇಕು. ಎಲ್ಲರೂ ನಗರಸಭೆಯೊಂದಿಗೆ ಕೈಜೋಡಿಸಬೇಕು. ಜನಸಾಮಾನ್ಯರು, ಜನಪ್ರತಿನಿಧಿಗಳು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಯಾರಾದರೂ ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಶ್ರೀಕಾಂತ್, ಜಗನ್ನಾಥ್, ಸೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು. ೨೬ಶಿರಾ೪: ಶಿರಾ ನಗರದ ಬಾಲಾಜಿ ನಗರ ರಸ್ತೆಯ ದಿನಸಿ ಅಂಗಡಿಗಳಲ್ಲಿದ್ದ ೪೦ ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟದ ಸುಮಾರು ೩೦೦ ಕೆ.ಜಿ ಪ್ಲಾಸ್ಟಿಕ್ ಕೈಚೀಲಗಳನ್ನು ನಗರಸಭೆ ಪೌರಾಯುಕ್ತರಾದ ರುದ್ರೇಶ್.ಕೆ. ಹಾಗೂ ನೌಕರರ ತಂಡ ಭೇಟಿ ನೀಡಿ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡರು.