ತಾಲೂಕಿಗೆ ಹೇಮಾವತಿ ಎತ್ತಿನಹೊಳೆ, ಅಪ್ಪರ ಭದ್ರ ನೀರಾವರಿ ಯೋಜನೆಗಳ ಮೂಲಕ ಶಿರಾ ಕ್ಷೇತ್ರವನ್ನು ತ್ರಿವೇಣಿ ಸಂಗಮ ಮಾಡಬೇಕೆಂಬ ಸಂಕಲ್ಪ ಅತಿ ಶೀಘ್ರದಲ್ಲಿಯೇ ಸಕಾರಗೊಳ್ಳುವಂತಹ ದಿನಗಳು ಬರಲಿವೆ ಎಂದು ಕಾಂಗ್ರೆಸ್ ಯುವ ಮುಖಂಡ ಸಂಜಯ್ ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿಗೆ ಹೇಮಾವತಿ ಎತ್ತಿನಹೊಳೆ, ಅಪ್ಪರ ಭದ್ರ ನೀರಾವರಿ ಯೋಜನೆಗಳ ಮೂಲಕ ಶಿರಾ ಕ್ಷೇತ್ರವನ್ನು ತ್ರಿವೇಣಿ ಸಂಗಮ ಮಾಡಬೇಕೆಂಬ ಸಂಕಲ್ಪ ಅತಿ ಶೀಘ್ರದಲ್ಲಿಯೇ ಸಕಾರಗೊಳ್ಳುವಂತಹ ದಿನಗಳು ಬರಲಿವೆ ಎಂದು ಕಾಂಗ್ರೆಸ್ ಯುವ ಮುಖಂಡ ಸಂಜಯ್ ಜಯಚಂದ್ರ ಹೇಳಿದರು.ಅವರು ತಾಲೂಕಿನ ಗೌಡಗೆರೆ ಹೋಬಳಿಯ ಭೂತ ಕಾಟನಹಳ್ಳಿ, ಗಜ್ಜಿಗರಹಳ್ಳಿ, ಮೇಳೆಕೋಟೆ ಗ್ರಾಮಗಳಲ್ಲಿ ಭರ್ತಿಯಾಗಿರುವ ಬ್ಯಾರೇಜ್ ಗಳನ್ನು ರೈತರೊಂದಿಗೆ ಶನಿವಾರ ವೀಕ್ಷಣೆ ಮಾಡಿ ಮಾತನಾಡಿದರು.
ಕೇಂದ್ರ ಸರಕಾರ ಅಪ್ಪರ ಭದ್ರ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಕಾಮಗಾರಿಯ ಅನುದಾನ ಬಿಡುಗಡೆ ಮಾಡಿ, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಶಿರಾ ಭಾಗದ ೬೫ ಕೆರೆಗಳಿಗೆ ನೀರು ಬಿಟ್ಟರೆ ಅನ್ನದಾತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ಶಿರಾ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಅಧ್ಯಕ್ಷ ಶರತ್ ಪಾಳೇಗಾರ, ತಾವರೆಕೆರೆ ಇಂಡಿಯನ್ ಫ್ಯೂಚರ್ ಸ್ಕೂಲ್ ಸಂಸ್ಥಾಪಕ ಬಲರಾಮ್, ಮುಖಂಡರಾದ ಎಂ.ಟಿ. ರಂಗನಾಥ ಗೌಡ, ನಾಗರಾಜ್, ಚೇತನ್ ಪಟೇಲ್, ಸಂತೋಷ್, ಮಹಾಲಿಂಗಪ್ಪ, ಲಕ್ಷ್ಮಿಕಾಂತ್, ತಿಮ್ಮರಾಜು, ನರಸಿಂಹಮೂರ್ತಿ, ಭಗವಾನ್, ತರೂರು ರಂಗನಾಥ್, ಅಶೋಕ, ಮಂಜುನಾಥ, ಅಜ್ಮಲ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.