ಶಿರಹಟ್ಟಿ ಶಾಸಕರು ಟೀಕೆ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ-ರಾಜು

| Published : May 25 2025, 02:46 AM IST / Updated: May 25 2025, 02:47 AM IST

ಶಿರಹಟ್ಟಿ ಶಾಸಕರು ಟೀಕೆ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ-ರಾಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಸಮಾವೇಶವನ್ನು ಈಚಗೆ ವಿಜಯನಗರದಲ್ಲಿ ನೆರವೇರಿಸಲಾಯಿತು. ಈ ಗ್ಯಾರಂಟಿ ಯೋಜನೆಗಳು ಸುಳ್ಳು ಯೋಜನೆಗಳು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರ ಲಮಾಣಿ ಟೀಕಿಸಿದ್ದು, ಟೀಕೆ ಬಿಟ್ಟು ಶಿರಹಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ತಾಲೂಕು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿ ಅಧ್ಯಕ್ಷ ರಾಜು ಡಾವಣಗೇರಿ ಸಲಹೆ ನೀಡಿದ್ದಾರೆ.

ಮುಂಡರಗಿ: ರಾಜ್ಯ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಸಮಾವೇಶವನ್ನು ಈಚಗೆ ವಿಜಯನಗರದಲ್ಲಿ ನೆರವೇರಿಸಲಾಯಿತು. ಈ ಗ್ಯಾರಂಟಿ ಯೋಜನೆಗಳು ಸುಳ್ಳು ಯೋಜನೆಗಳು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರ ಲಮಾಣಿ ಟೀಕಿಸಿದ್ದು, ಟೀಕೆ ಬಿಟ್ಟು ಶಿರಹಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ತಾಲೂಕು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿ ಅಧ್ಯಕ್ಷ ರಾಜು ಡಾವಣಗೇರಿ ಸಲಹೆ ನೀಡಿದ್ದಾರೆ. ಅವರು ಈ ಕುರಿತು ಶನಿವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ನುಡಿದಂತೆ ನಡೆದು ತನ್ನ ಬದ್ಧತೆ ಪ್ರದರ್ಶಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಗೃಹಲಕ್ಷ್ಮಿ ಹಣ ಬರುತ್ತಿರುವುದು ಸುಳ್ಳೇ ? ಪ್ರತಿ ಮನೆಗೆ ಉಚಿತ ವಿದ್ಯುತ್ ಕೊಡುತ್ತಿರುವುದು ಸುಳ್ಳೇ ? ಶಕ್ತಿ ಯೋಜನೆಯಲ್ಲಿ ನಿತ್ಯ ಸಾವಿರಾರು, ಲಕ್ಷಾಂತರ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಓಡಾಡುತ್ತಿರುವುದು ಕಾಣುತ್ತಿಲ್ಲವೆ ? ಯುವಕರಿಗೆ ಯುವನಿಧಿ ಬರುತ್ತಿರುವುದು ಗೊತ್ತಿಲ್ಲವೆ? ಇವು ಯಾವವೂ ಕಾಂಗ್ರೆಸ್ ಸರ್ಕಾರದ ಸಾಧನೆಯಲ್ಲವೆ ? ಇಂತಹ ಸಾಧನೆಗಳ ಬಗ್ಗೆ ಶಾಸಕರು ಟೀಕೆ ಮಾಡುವ ಬದಲು ಕ್ಷೇತ್ರದಲ್ಲಿ ಅನೇಕ ಮೂಲಬೂತಸೌಲಭ್ಯಗಳ ಕೊರತೆ ಇದೆ. ರಸ್ತೆ, ಚರಂಡಿ, ಆಶ್ರಯ ಮನೆಗಳ ವಿತರಣೆ, ಹಲವು ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪ್ರಯತ್ನಿಸಬೇಕು. ಸರಕಾರ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಬೇಕೆ ವಿನಹ ವೃಥಾ ಟೀಕೆ ಮಾಡುವುದು ಸಲ್ಲ ಎಂದ ರಾಜು ತಿಳಿಸಿದರು.