ಗದಗ: ಸಂಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಸಮುದಾಯದ ಶಿಕ್ಷಣ, ಧರ್ಮ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ದಾನ ಮಾಡಿ ಭಾರತೀಯ ಸಂಸ್ಥಾನಿಕ ಆಡಳಿತಗಾರರಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದವರು ಸಿರಸಂಗಿ ಲಿಂಗರಾಜರು ಎಂದು ಮುಳಗುಂದ ಸರ್ಕಾರಿ ಪಪೂ ಮಹಾವಿದ್ಯಾಲಯದ ಪ್ರಾ. ಡಾ. ವಿ.ಕೆ. ದ್ಯಾಮನಗೌಡ್ರ ತಿಳಿಸಿದರು.ನಗರದ ಡಾ. ತೋಂಟದ ಸಿದ್ಧಲಿಂಗ ಶ್ರೀ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಶಿರಸಂಗಿ ಲಿಂಗರಾಜರ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿ, ಶಿರಸಂಗಿ ಲಿಂಗರಾಜರು ಜನಸಾಮಾನ್ಯರ ಸಂಕಟಗಳಿಗೆ ದನಿಯಾಗಿ ಸರ್ವಾಂಗ ಸುಂದರ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಸಮಾಜಕ್ಕೆ ತಮ್ಮ ಬದುಕನ್ನು ಸಮರ್ಪಿಸಿ ಅಜರಾಮರಾಗಿದ್ದಾರೆ ಎಂದರು.

ಎಲ್ಲ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಸಂಘ- ಸಂಸ್ಥೆಗಳಿಗೆ ಸಹಾಯಹಸ್ತ ಚಾಚಿ ಸಮಾಜೋನ್ನತಿಗೆ ಪ್ರಯತ್ನಿಸಿದರು. ಇವರ ಸಾಮಾಜಿಕ ಚಿಂತನೆಗಳು ಬ್ರಿಟಿಷ ಅಧಿಕಾರಿಗಳನ್ನು ಸೆಳೆದಿತ್ತು. ಕೃಷಿ, ಕೆರೆ ಅಭಿವೃದ್ಧಿ, ಶಿಕ್ಷಣಕ್ಕೆ ಪ್ರೋತ್ಸಾಹ, ಸಮಾಜ ಸಂಘಟನೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು. ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಲಿಂಗರಾಜರ ತ್ಯಾಗ ಜೀವನ ಮಾದರಿ. ಅನೇಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದರೂ ಸಮಾಜದ ಕುರಿತು ಸದಾ ಚಿಂತಿಸಿದರು. ಅವರ ದೂರದೃಷ್ಟಿಯ ಫಲವಾಗಿ ಈ ಭಾಗದ ಜನ ಶಿಕ್ಷಣವಂತರಾಗಲು ಸಾಧ್ಯವಾಯಿತು ಎಂದರು.ಅಧ್ಯಕ್ಷತೆ ವಹಿಸಿದ್ಧ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಸೌಮ್ಯ ಕಡ್ಡಿಯವರ, ಕೆ.ಎಚ್. ಬೇಲೂರ, ರಾಜಶೇಖರ ದಾನರಡ್ಡಿ, ವಿದ್ಯಾಧರ ದೊಡ್ಡಮನಿ, ಡಾ. ರಶ್ಮಿ ಅಂಗಡಿ, ರತ್ನಾ ಪುರಂತರ, ಸುರೇಶ ಕುಂಬಾರ, ಬಿ.ಬಿ. ಹೊಳಗುಂದಿ, ಅಮರೇಶ ರಾಂಪೂರ, ರತ್ನಕ್ಕ ಪಾಟೀಲ, ಜೆ.ಎ. ಪಾಟೀಲ, ಎಂ.ಎಸ್. ಕಾಮನಹಳ್ಳಿ, ಈರನಗೌಡ ಮಣಕವಾಡ, ಎಸ್.ಡಿ. ಹೊನ್ನಪ್ಪನವರ, ಶೈಲಜಾ ಗಿಡ್ನಂದಿ, ಎಂ.ಎಫ್. ಡೋಣಿ, ಯಲ್ಲಪ್ಪ ವಸ್ತ್ರದ, ರವಿ ದೇವರಡ್ಡಿ, ಕೆ.ಎಸ್. ಬಾಳಿಕಾಯಿ, ನಾಗಪ್ಪ ಸುರಳಿಕೇರಿ, ಮಲ್ಲಿಕಾರ್ಜುನ ನಿಂಗೋಜಿ, ಎಸ್.ಯು. ಸಜ್ಜನಶೆಟ್ಟರ, ಎಸ್.ಬಿ. ಗೊಜನೂರ, ಸಂಗಪ್ಪ ಹೊನ್ನಪ್ಪನವರ, ಎಸ್.ಪಿ. ಹೊಂಬಳ, ಈಶ್ವರಪ್ಪ ಕುಬುಸದ, ಅಕ್ಕಮ್ಮ ಪಾರ್ವತಿಮಠ, ರಾಜೇಶ್ವರ ಬಡ್ನಿ, ಅನಸೂಯಾ ಮಿಟ್ಟಿ, ಸತೀಶ ಕುಲಕರ್ಣಿ, ಕೆ.ಎಸ್. ಪಲ್ಲೇದ, ಬಿ.ಎಂ. ಅಂಗಡಿ ಮೊದಲಾದವರು ಇದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಸತೀಶ ಚನ್ನಪ್ಪಗೌಡ್ರ ಸ್ವಾಗತಿಸಿದರು. ಜೆ.ಎ. ಪಾಟೀಲ ವಂದಿಸಿದರು.