ಶಿರಸಂಗಿ ಲಿಂಗರಾಜ ಮಹಾರಾಜರ ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ

| Published : Oct 16 2024, 12:41 AM IST / Updated: Oct 16 2024, 12:42 AM IST

ಸಾರಾಂಶ

ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ನುಡಿದರು.

ನಗರದಲ್ಲಿರುವ ಮನಿಯಾರ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಲಿಂಗರಾಜ ಸಂಸ್ಥೆ, ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ವಿಜಯಪುರ ಹಾಗೂ ಬಸವನಬಾಗೇವಾಡಿ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ ಶಿರಸಂಗಿ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.ಶಿರಸಂಗಿ ಲಿಂಗರಾಜ ಮಹಾರಾಜರು ಶಿರಸಂಗಿ ಸಂಸ್ಥಾನದ ಕರ್ಣಧಾರತ್ವ ವಹಿಸಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಎಂಬ ದಿವ್ಯ ಬೆಳಕು ಪ್ರಾಪ್ತವಾಗಬೇಕು ಎಂದು ಕನಸು ಕಂಡಿದ್ದ ಅವರು ಈ ಕನಸು ನನಸಾಗಿಸಲು ಹೇರಳವಾಗಿ ಶಿಕ್ಷಣ ಸಂಸ್ಥೆಗಳಿಗೆ ದಾನ ಧರ್ಮ ಮಾಡಿದರು. ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶಮಯ. ಅವರ ತತ್ವಾದರ್ಶಗಳನ್ನು ಅರಿತು ನಾವು ಮುನ್ನಡೆಯಬೇಕಿದೆ ಎಂದರು.

ಆಡಳಿತದಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಈ ನೌಕರರು ದಿನನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವುದುಂಟು, ಅವರ ಒತ್ತಡ ನಿವಾರಣೆಗಾಗಾಗಿ ಆಟೋಟದಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು.ಐಆರ್‌ಬಿ ಕಮಾಂಡೆಂಟ್ ಪ್ರಸನ್ನಕುಮಾರ ಮಾತನಾಡಿ, ಆಟಗಳು ಏಕಾಗ್ರತೆ, ಆರೋಗ್ಯ ವೃದ್ಧಿಗೆ ಅತ್ಯಂತ ಸಹಾಯಕಾರಿ. ಸರ್ಕಾರಿ ನೌಕರರಿಗಾಗಿ ಟೂರ್ನಾಮೆಂಟ್ ಆಯೋಜಿಸಿರುವುದು ಅರ್ಥಪೂರ್ಣ ಎಂದರು.ಲಿಂಗರಾಜ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ಬಿ.ಎಸ್.ಜನಗೊಂಡ, ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಅಶೋಕ ಯಡಹಳ್ಳಿ, ಆರ್‌.ಜಿ.ಕುರಿ, ಬಿ.ಎಸ್.ಮಜ್ಜಗಿ, ಎ.ಎಸ್.ಪಾಟೀಲ, ಸಿ.ಟಿ.ಚೌಧರಿ, ಎ.ಎನ್.ಮಾತಾಳಿ, ಆರ್‌.ಎಸ್.ಬಿಸನಾಳ, ಪ್ರಕಾಶ ಜುಮನಾಳ, ಮಲ್ಲಿಕಾರ್ಜುನ ಟಕ್ಕಳಕಿ, ಎಚ್.ಕೆ.ಬೂದಿಹಾಳ, ಸುನೀಲ ಬಿರಾದಾರ, ವಿನೋದಕುಮಾರ ಮಣೂರ, ಬಸವರಾಜ ಕರಿಕಬ್ಬಿ ಮೊದಲಾದವರು ಉಪಸ್ಥಿತರಿದ್ದರು.