ಸಾರಾಂಶ
ಕನ್ನಡಪ್ರಭ ವಾರ್ತೆ, ಕಾಪು
ಇಲ್ಲಿನ ಬಂಟಕಲ್ಲು ಶಿರ್ವ ರೋಟರಿ ಸಭಾಭವನದಲ್ಲಿ ಜರುಗಿದ ರಾಷ್ಟ್ರದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿರ್ವ ರೋಟರಿ ನಿಯೋಜಿತ ಅಧ್ಯಕ್ಷ ರಿಚ್ಚಾರ್ಡ್ ಪಾವ್ಲ್ ಫೆರಾವೋ ರಾಷ್ಟ್ರಧ್ವಜ ಅರಳಿಸಿದರು.ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ಸಂದೇಶ ನೀಡಿದರು. ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೋ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಹೆರಾಲ್ಡ್ ಕುಟಿನೋ ಅತಿಥಿಗಳಾಗಿದ್ದರು. ಹಿರಿಯರಾದ ಲೂಕಾಸ್ ಡಿಸೋಜ, ಡಾ. ವಿಟ್ಠಲ್ ನಾಯಕ್, ಗ್ರಾ.ಪಂ.ಸದಸ್ಯೆ ಗ್ರೇಸಿ ಕರ್ಡೋಜಾ, ವಿಷ್ಣುಮೂರ್ತಿ ಸರಳಾಯ, ಅಮಿತ್ ಅರಾನ್ಹಾ, ದಿನೇಶ್ ಕುಲಾಲ್ ಉಪಸ್ಥಿತರಿದ್ದರು.ಉಡುಪಿ ಶ್ರೀ ಅದಮಾರು ಮಠದ ಆಡಳಿತದ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಾಲಯದಲ್ಲಿ ಜರುಗಿದ ರಾಷ್ಟ್ರದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿವರ್ಯರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ರಾಷ್ಟ್ರಧ್ವಜ ಅರಳಿಸಿ ಸಂದೇಶ ನೀಡಿ ಸ್ವಾತಂತ್ರ್ಯ ಶತಮಾನೋತ್ಸವದ 2047ರಲ್ಲಿ ಭಾರತವನ್ನು "ವಿಶ್ವಗುರು ಭಾರತ -ಶ್ರೇಷ್ಠ ಭಾರತ " ವಾಗಿ ನಿರ್ಮಿಸುವಲ್ಲಿ ಭಾರತೀಯರೆಲ್ಲರೂ ಕೈಜೋಡಿಸಬೇಕು ಎಂದು ಕರೆಯಿತ್ತರು. ಕ್ಷೇತ್ರದ ವೈದಿಕರು, ಭಗವದ್ಭಕ್ತರು ಉಪಸ್ಥಿತರಿದ್ದರು.* ಬಂಟಕಲ್ಲು ಬಿ.ಸಿ.ರೋಡ್ ರಿಕ್ಷಾ ಯೂನಿಯನ್ ವತಿಯಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್.ಪಾಟ್ಕರ್ ರಾಷ್ಟ್ರಧ್ವಜ ಅರಳಿಸಿ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಖ್ಯಾತ ವೈದ್ಯರಾದ ಡಾ.ಪ್ರಕಾಶ್ ಭಟ್, ಜಿಲ್ಲಾ ಟ್ಯಾಕ್ಸಿಮ್ಯಾನ್ ಎಸೋಸಿಯೇಶನ್ ಉಪಾಧ್ಯಕ್ಷ ಪಲ್ಕೆ ವಿನ್ಸೆಂಟ್ ಕಸ್ತಲಿನೊ, ಗ್ರಾ.ಪಂ.ಸದಸ್ಯೆ ವಾಲೆಟ್ ಕಸ್ತಲಿನೊ, ಡೇನಿಸ್ ಡಿಸೋಜ, ಉಮೇಶ್ ಪ್ರಭು, ವಲೇರಿಯನ್ ಮತಾಯಸ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.