ಸಾರಾಂಶ
ಕೊಳ್ಳೇಗಾಲದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರು ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಎಂಇಎಸ್ ಶಿವಸೇನೆ ಪುಂಡರ ದೌರ್ಜನ್ಯ ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಪಟ್ಟಣದ ವಿವಿಧೆಡೆ ಮೆರವಣಿಗೆಯಲ್ಲಿ ಸಾಗಿಬಂದ ಕರವೇ ಕಾರ್ಯಕರ್ತರು, ರೈತ ಸಂಘದ ಮುಖಂಡರು ಎಂಇಎಸ್ ಮತ್ತು ಶಿವಸೇನೆಯ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಲೇ ಬಂದಿದ್ದಾರೆ, ಕಂಡಕ್ಟರ್ ಮೇಲೂ ದೌರ್ಜನ್ಯ ಎಸಗಿರುವುದು ಖಂಡನೀಯ. ಕೂಡಲೆ ಸರ್ಕಾರ ಇಂತಹ ಪುಂಡರ ಹೆಡೆಮುರಿ ಕಟ್ಟಬೇಕು, ಹಲ್ಲೆಗೈದವರ ಮೇಲೆ ಶಿಸ್ತು ಕ್ರಮ ಆಗಬೇಕು ಎಂದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ನಾಗರಾಜು, ಲಕ್ಷ್ಮಣಮೂರ್ತಿ, ರಾಮಕೃಷ್ಣ, ದಶರಥ್, ಚಿನ್ನಸ್ವಾಮಿ ಮಾಳಿಗೆ, ವೀರಭದ್ರಸ್ವಾಮಿ, ಮೊಳೆ ರಾಜಣ್ಣ, ಸೋಮಣ್ಣ, ಕರವೇ (ನಾರಾಯಣ ಗೌಡ ಬಣದ) ತಾಲೂಕು ಅಧ್ಯಕ್ಷ ಅಯಾಜ್ , ಜೆ.ನಿಂಗರಾಜು, ಇದ್ರೀಸ್ ಪಾಷ, ಇರ್ಪಾನ್, ನವೀನ್, ಮದು, ಕುಮಾರ, ಸುರೇಶ್, ಮಹಮ್ಮದ್ ಸಮೀರ್, ಮೂರ್ತಿ ಶಾಸ್ತ್ರೀ, ಬಿ.ಬಸವರಾಜು, ಸಬೀರ್, ಮಹೇಂದ್ರ, ಸತ್ಯರಾಜ್, ತೊಸೀಫ್, ರಾಜಪ್ಪ, ಮಹಿಳಾ ಘಟಕ ಜಿಲ್ಲಾಧ್ಯಕ್ಷರು ಭಾಗ್ಯಲಕ್ಷ್ಮೀ, ಮಹಿಳಾ ಘಟಕ ತಾಲ್ಲೂಕು ಅಧ್ಯಕ್ಷರು ವಿಜಯರಾಣಿ, ಕಾರ್ಯದರ್ಶಿ ಸುಮಾ, ನಿಶಾರ್ ಅಹಮದ್, ಇಸ್ಮಾಯಿಲ್, ನವಾಜ್ ಇನ್ನಿತರರಿದ್ದರು.