ಸಾರಾಂಶ
ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಮೈಸೂರಿನ ಕೆ.ಜಿ ಕೊಪ್ಪಲಿನ ಶಿವು ಮತ್ತು ಸ್ನೇಹಿತರು ಚಲನಚಿತ್ರ ನಟ ಶಿವರಾಜ್ ಕುಮಾರ್ ಬೇಗ ಗುಣಮುಖವಾಗಲೆಂದು ಉರುಳುಸೇವೆ ಮಾಡುತ್ತಿರುವುದು.
ಹನೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಮೇರಿಕದಲ್ಲಿ ನಡೆಯುತ್ತಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಬೇಗ ಗುಣಮುಖರಾಗಲಿ ಎಂದು ಮೈಸೂರಿನ ಕೆ.ಜಿ.ಕೊಪ್ಪಲಿನ ಶಿವು ಹಾಗೂ ಸ್ನೇಹಿತರು ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ಶಿವರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕೆ.ಜಿ.ಕೊಪ್ಪಲಿನ ಶಿವು ಮಲೆಮಹದೇಶ್ವರ ಬೆಟ್ಟದಲ್ಲಿ ಅಷ್ಟೋತ್ತರ ಬಿಲ್ವಾರ್ಚನೆ ಪೂಜೆ ಮಾಡಿಸಿದ್ದಾರೆ. ಇವರಿಗೆ ಸ್ನೇಹಿತರಾದ ದರ್ಶನ್, ಅಭಿರಾಜ್, ಮನೋಹರ್, ಟಿ.ನಾರಾಯಣ್ ಶಿವಮಲ್ಲು ಸಾಥ್ ನೀಡಿದ್ದಾರೆ. ಇದಲ್ಲದೆ ದೇವಸ್ಥಾನದ ಸುತ್ತಲೂ ಮೂರು ಬಾರಿ ಉರುಳು ಸೇವೆ ಮಾಡಿ ಕೇಶ ಮುಂಡನೆ ಮಾಡಿಸುವ ಮೂಲಕ ವಿಶೇಷವಾಗಿ ಹರಕೆ ಸಲ್ಲಿಸಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿ ಶಿವು ಮಾತನಾಡಿ, ವಿದೇಶದಲ್ಲಿ ಶಿವಣ್ಣ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಇದು ಯಶಸ್ವಿಯಾಗಿ ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಚಿತ್ರರಂಗದಲ್ಲಿ ಮುಂದುವರಿಯಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ. ಈ ನೆಟ್ಟಿನಲ್ಲಿ ಮಹದೇಶ್ವರದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ ಎಂದರು. ಬೈರತಿ ರಣಗಲ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಭರ್ಜರಿ ಸ್ವಾಗತ ಕೋರಿ ಚಿತ್ರ ಶತದಿನೋತ್ಸವ ಪೂರೈಸಲೆಂದು ಶುಭ ಕೋರಿದ್ದರು. ಶಿವರಾಜಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ಅಮೆರಿಕಾಗೆ ತೆರಳುತ್ತಿದ್ದಾಗಲು ಏರ್ಪೋರ್ಟ್ ಗೆ ಭೇಟಿ ನೀಡಿ ಬೀಳ್ಕೊಡುಗೆ ಮಾಡಿ ವಾಪಸ್ ತೆರಳಿದ್ದರು.