ಸಾರಾಂಶ
ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆಯುವ 395ನೇ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದ ಪ್ರಾಂಗಣದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಭೂಮಿ ಪೂಜೆ ದುರ್ಗ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆಯುವ 395ನೇ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದ ಪ್ರಾಂಗಣದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಭೂಮಿ ಪೂಜೆ ದುರ್ಗ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ವೇದಮೂರ್ತಿ ಗೋಪಾಲಕೃಷ್ಣ ಭಟ್ ನೇತೃತ್ವ ವಹಿಸಿದ್ದರು.ಫೆಬ್ರವರಿ 23ರಂದು ಮರಾಠಿ ಸಂಘದ ವತಿಯಿಂದ ಛತ್ರಪತಿ ಶಿವಾಜಿ 395ನೇ ಜಯಂತಿ, ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ, ಮಹಿಳೆಯರ ತ್ರೋಬಾಲ್, ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ ನಡೆಯಲಿದೆ. ಸಮಾಜದ ಸಮಸ್ತ ಸಮಸ್ತ ಬಂಧುಗಳು ಇದರಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಶೇಖರ ಕಡ್ತಲ ವಿನಂತಿಸಿದರು.ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ಚೇರ್ಕಾಡಿ, ಸ್ವಾಮಿ ತೀರ್ಥ ಮಾರ್ಕೆಟಿಂಗ್ ಮುಂಬೈನ ಸುಧಾಕರ ನಾಯ್ಕ್ ಕುರ್ಪಾಡಿ, ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ನಾಯ್ಕ್, ಆಡಳಿತ ಸಮಿತಿ ಅಧ್ಯಕ್ಷ ಶಂಕರ್ ನಾಯ್ಕ್ ದುರ್ಗ, ಸಂಘದ ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ್ ಸೂಡ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು, ಅಜೆಕಾರು ವಲಯ ಮರಾಠಿ ಸಂಘದ ಅಧ್ಯಕ್ಷ ಶೇಖರ್ ನಾಯ್ಕ್ ಪಾಲ್ಜಡ್ಡು ಉಪಸ್ಥಿತರಿದ್ದರು.
ರೇವತಿ ಸಂತೋಷ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀನಿವಾಸ್ ನಕ್ರೆ ಧನ್ಯವಾದ ಸಲ್ಲಿಸಿದರು, ಕ್ರೀಡಾ ಕಾರ್ಯದರ್ಶಿ ಪವನ್ ದುರ್ಗಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಮರಾಠಿ ಸಮಾಜದ ಬಂಧುಗಳು ಉಪಸ್ಥಿತರಿದ್ದರು.