ಸಾರಾಂಶ
ಇಂದಿನ ಯುವಪೀಳಿಗೆ ಛತ್ರಪತಿಯಂತೆಯೇ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ದೇಶ ಕಂಡ ಅಪ್ರತಿಮ ಹೋರಾಟಗಾರ ಅವರು, ಅನೇಕ ವೈರಿಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯ ಕಟ್ಟಿ ಹಿಂದುತ್ವ ಉಳಿಸಿದ ಹಿಂದೂಗಳ ಹೃದಯ ಸಾಮ್ರಾಟವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಯುವಕರಿಗೆ ಧೈರ್ಯ, ಸಾಹಸ ಹಾಗೂ ಅಭಿಮಾನದ ಸಂಕೇತವಾಗಿರುವ ಶಿವಾಜಿ ಮಹಾರಾಜರು ಆದರ್ಶಪ್ರಾಯರಾಗಿದ್ದಾರೆ ಎಂದು ನಗರಪಾಲಿಕಾ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಹೇಳಿದರು.ಶಿವಾಜಿ ಮಹಾರಾಜ್ ಅವರ ಜಯಂತಿ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ಚಾಮುಂಡಿಪುರಂ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ಛತ್ರಪತಿಯಂತೆಯೇ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ದೇಶ ಕಂಡ ಅಪ್ರತಿಮ ಹೋರಾಟಗಾರ ಅವರು, ಅನೇಕ ವೈರಿಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯ ಕಟ್ಟಿ ಹಿಂದುತ್ವ ಉಳಿಸಿದ ಹಿಂದೂಗಳ ಹೃದಯ ಸಾಮ್ರಾಟವಾಗಿದ್ದಾರೆ. ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಏಕಾಂಗಿಯಾಗಿ ಹೋರಾಟ ಮಾಡಿದವರು. ಸೈನ್ಯ ಕಟ್ಟಿಕೊಂಡು ದೊಡ್ಡ ದೊಡ್ಡ ಸೈನ್ಯ ಹೊಂದಿದ್ದ ದೇಶ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಿದವರು ಎಂದು ಸ್ಮರಿಸಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಜೀಜಾಬಾಯಿ ಬಾಲ್ಯದಲ್ಲಿಯೇ ಶಿವಾಜಿಗೆ ಧಾರ್ಮಿಕ ಸಂಸ್ಕಾರದೊಂದಿಗೆ ಯುದ್ಧ ಕಲೆಗಳನ್ನು ಕರಗತ ಮಾಡಿಸಿದ್ದರು. ಇದರಿಂದಾಗಿ ಅವರು ಛತ್ರಪತಿಯಾಗಿ ಬಾನೆತ್ತರಕ್ಕೆ ಬೆಳೆದು ಅಜರಾಮರಾಗಿದ್ದಾರೆ. ಹಲವು ಕೋಟೆಗಳನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಜಗದೀಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷರಾದ ನವೀನ್ ಕೆಂಪಿ, ಅಜಯ್ ಶಾಸ್ತ್ರಿ, ರಂಗನಾಥ್, ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಕಾರ್ಯದರ್ಶಿ ಮಂಜುಳಾ, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ , ಸುಶೀಲ, ಅಪೂರ್ವ ಸುರೇಶ್, ಸುಚಿಂದ್ರ, ಪುಷ್ಪವತಿ, ರಾಘವೇಂದ್ರ, ರಾಕೇಶ್, ಶಿವು ಇದ್ದರು.ಸೈನಿಕ ಅಕಾಡೆಮಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಮೈಸೂರು:ನಗರದ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಿತು.
ಎನ್.ಎಸ್.ಜಿ. ಬ್ಲಾಕ್ ಕ್ಯಾಟ್ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕ ಸಿ.ಎಂ. ಶ್ರೀಧರ ಮಾತನಾಡಿ, ಹಿಂದೂ ಮಹತ್ವವನ್ನು ಚಿಕ್ಕವಯಸ್ಸಿನಿಂದಲೇ ತನ್ನ ತಾಯಿಯಿಂದ ಅರಿತು ರಾಜ ಮನತನವನ್ನು ಬಿಟ್ಟು ಹಿಂದೂ ಸೇವಕನ್ನಾಗಿ ಹಿಂದುತ್ವವನ್ನು ಉಳಿಸಿ ಬೆಳೆಸಿದ ವೀರ ಶಿವಾಜಿ ಎಂದು ತಿಳಿಸಿದರು.ಅಧ್ಯಾಪಕರು, ವಿಜಯಕುಮಾರ್ ಇದ್ದರು.