ಸಾರಾಂಶ
ವಿಜಯಪುರ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ಸೋಮವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು. ಸಂಜೆ 6.30ರಿಂದ ರಾತ್ರಿ 9ರ ವರೆಗೂ ನಗರದ ರಾಮಮಂದಿರದಿಂದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯ ಮೂಲಕ, ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ ಸಂಚರಿಸಿ ಶಿವಾಜಿ ವೃತ್ತದ ವರೆಗೂ ಅದ್ಧೂರಿಯಾದ ಮೆರವಣಿಗೆ ನಡೆಸಲಾಯಿತು.

ಹೈದ್ರಾಬಾದ್ ನ ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಟಿ.ರಾಜಾಸಿಂಗ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಶಿವಾಜಿ ಜಯಂತಿ ಹಿನ್ನೆಲೆ ವಿಜಯಪುರಕ್ಕೆ ಆಗಮಿಸಿರುವ ರಾಜಾಸಿಂಗ್ ಸುಮಾರು ಎರಡೂವರೆ ಗಂಟೆಗಳ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಸಕ ಬಸನಗೌಡ ಯತ್ನಾಳ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದು ಮತ್ತಷ್ಟು ಮೆರಗು ತಂದಿತ್ತು. ಸಿದ್ದೇಶ್ವರ ದೇಗುಲದ ಎದುರು ಹಾಯ್ದು ಶಿವಾಜಿ ಚೌಕ್ ತಲುಪಲು ಹೊರಟಿದ್ದ ರ್ಯಾಲಿಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು, ಅಭಿಮಾನಿಗಳು, ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಯುವಕರು ಕೂಡ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಗರದೆಲ್ಲೆಡೆ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳ ಹಾರಾಟ ಮುಗಿಲು ಮುಟ್ಟಿದ್ದವು. ಶಾಸಕ ರಾಜಾಸಿಂಗ್ ಗೆ ಎಸ್ ಪಿ ಋಷಿಕೇಶ ಸೋನಾವಣೆ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಶಿವಾಜಿ ಮಹಾರಾಜರ ಮೆರವಣಿಗೆ ಕಾರ್ಯಕ್ರಮಕ್ಕೆ ನಾಲ್ವರು ಡಿವೈಎಸ್ ಪಿ, ಹತ್ತು ಸಿಪಿ ಐ, ಇಪ್ಪತ್ತಕ್ಕೂ ಅಧಿಕ ಪಿಎಸ್ ಐ, ಎರಡು ಡಿ ಎ ಆರ್, ಕೆಎಸ್‌ಆರ್‌ಪಿ ವಾಹನ ನಿಯೋಜನೆ ಮಾಡಿ ಭಾರೀ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಗಾಂಧಿ ವೃತ್ತದ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಗಲಾಟೆ ಮಾಡುತ್ತಿದ್ದು, ಪೊಲೀಸರು ಲಾಠಿ ರುಚಿ ತೋರಿಸಿದರು. ಸಂಜೆಯಿಂದ ಇಡೀ ವಿಜಯಪುರ ನಗರದಲ್ಲಿ ಹಿಂದುಪರ ಘೋಷಣೆಗಳು ಮೊಳಗಿದ್ದು, ಪ್ರಮುಖ ರಸ್ತೆಗಳು ಕೇಸರಿಮಯವಾಗಿದ್ದವು.