ಬಂಗಾರಪೇಟೆ: ಛತ್ರಪತಿ ಶಿವಾಜಿ ಅವರು ಕೇವಲ ವ್ಯಕ್ತಿಯಾಗಿರದೆ ಹಿಂದೂ ಸಾಮ್ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದವರು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಬಣ್ಣಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಮರಾಠ ಸಮುದಾಯದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, 17ನೇ ವಯಸ್ಸಿಗೆ ಯದ್ಧಭೂಮಿಯಲ್ಲಿ ನಿಂತು ಹೋರಾಟದ ಧೀರ ಶಿವಾಜಿ. ಬಾಲ್ಯದಿಂದಲೇ ಅವರ ತಾಯಿ ಶಿವಾಜಿಗೆ ಯೋಧರಾಗಿ ದೇಶ ಕಾಯಬೇಕೆಂದು ದೇಶ ಪ್ರೇಮ ತುಂಬಿದ್ದರಿಂದ ಅವರಲ್ಲಿ ದೇಶ ಪ್ರೇಮ ಉಂಟಾಗಿ ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕಾಗಿ ಶ್ರಮಿಸಿದರು ಎಂದರು.ಶಿವಾಜಿರವರ ಧರ್ಮನಿರಪೇಕ್ಷ ಆಡಳಿತಗಾರರಾಗಿದ್ದರು. ಮಹಿಳೆಯರನ್ನು ಗೌರವಿಸುತ್ತಿದ್ದರು ಮತ್ತು ರೈತರ ಕಲ್ಯಾಣಕ್ಕಾಗಿ ಶ್ರಮಿಸಿದವರು. ಈ ದಿನ ಕೇವಲ ಜನ್ಮದಿನವಲ್ಲ ಬದಲಾಗಿ ಅವರ ಆದರ್ಶಗಳು, ಶೌರ್ಯ ಮತ್ತು ನಾಯಕತ್ವದ ಗುಣಗಳನ್ನು ಪ್ರಸ್ತುತ ಪೀಳಿಗೆಗೆ ನೆನಪಿಸುವ ದಿನವಾಗಿದೆ. ಛತ್ರಪತಿ ಶಿವಾಜಿ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು ಎಂದರು.ಈ ವೇಳೆ ತಹಸೀಲ್ದಾರ್ ಸುಜಾತ, ಮರಾಠ ಸಮುದಾಯದ ಅಧ್ಯಕ್ಷ ಚಂದ್ರಶೇಖರರಾವ್, ಉಪಾಧ್ಯಕ್ಷ ಕಿಶನ್ ರಾವ್, ಮುಖಂಡರಾದ ಮಾದುರಾವ್, ಪ್ರಕಾಶ್‌ರಾವ್, ವೆಂಕೋಬರಾವ್ ಪಡತಾರೆ, ಪ್ರಭಾಕರ್ ರಾವ್, ರಾಮಚಂದ್ರರಾವ್, ನಾರಾಯಣರಾವ್,ಗಂಗೋಜಿರಾವ್, ವೆಂಕೋಬರಾವ್ ಇತರರು ಇದ್ದರು.
ಶಿವಾಜಿ ಹಿಂದೂ ಸಾಮ್ರಾಜ್ಯಕ್ಕೆ ದೊಡ್ಡ ಶಕ್ತಿ: ನಾರಾಯಣಸ್ವಾಮಿ
ಶಿವಾಜಿರವರ ಧರ್ಮನಿರಪೇಕ್ಷ ಆಡಳಿತಗಾರರಾಗಿದ್ದರು. ಮಹಿಳೆಯರನ್ನು ಗೌರವಿಸುತ್ತಿದ್ದರು ಮತ್ತು ರೈತರ ಕಲ್ಯಾಣಕ್ಕಾಗಿ ಶ್ರಮಿಸಿದವರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.