ಸಾರಾಂಶ
ವೀರಶೈವ ಲಿಂಗಾಯತ ಬಸವ ಸಮಿತಿ ಹಲವಾರು ಸಾಮಾಜಿಕ ಕಾರ್ಯ ಮಾಡಿಕೊಂಡು ಶಿವಕುಮಾರ ಸ್ವಾಮೀಜಿಗಳ ಹಾದಿಯಲ್ಲಿ ಸಾಗುತ್ತಿದೆ. ಶತಾಯುಷಿಗಳಾಗಿ ಬದುಕಿದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಕೊಟ್ಟಿರುವ ಸಂದೇಶ ಸರ್ವ ಕಾಲಕ್ಕೂ ಸಲ್ಲುವಂತಹದು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಶತಾಯುಷಿ, ತ್ರಿವಿಧ ದಾಸೋಹಿಗಳಾಗಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಬದುಕಿದ ಜೀವನ ಶೈಲಿ ಸರ್ವಕಾಲಕ್ಕೂ ಸಲ್ಲುವಂತಹದ್ದು ಎಂದು ವೀರಶೈವ ಲಿಂಗಾಯತ ಬಸವ ಸಮಿತಿ ಅಧ್ಯಕ್ಷ ಎಚ್.ಬಿ.ಮಂಜುನಾಥ್ ತಿಳಿಸಿದರು.ನಗರದ ಕೆ.ಆರ್ ರಸ್ತೆಯಲ್ಲಿ ವೀರಶೈವ ಲಿಂಗಾಯತ ಬಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣ, ದಾಸೋಹ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಬದುಕಿ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಶ್ರೀಗಳು ನಮ್ಮನಗಲಿ ಆರು ವರ್ಷಗಳೇ ಉರುಳಿದರೂ, ಅವರ ಆದರ್ಶಗಳು, ಬದುಕಿನ ಚಿಂತನೆಗಳು ನಡೆದುಕೊಂಡ ರೀತಿ, ನೀತಿ, ಆಚಾರ- ವಿಚಾರಗಳು ಇಂದಿಗೂ ಜೀವಂತವಾಗಿವೆ ಎಂದರು.ಡಿವೈಎಸ್ಪಿ ಶಂಕರೇಗೌಡ ಅಣ್ಣ ಸಾಹೇಬ್ ಪಾಟೀಲ್ ಮಾತನಾಡಿ, ವೀರಶೈವ ಲಿಂಗಾಯತ ಬಸವ ಸಮಿತಿ ಹಲವಾರು ಸಾಮಾಜಿಕ ಕಾರ್ಯ ಮಾಡಿಕೊಂಡು ಶಿವಕುಮಾರ ಸ್ವಾಮೀಜಿಗಳ ಹಾದಿಯಲ್ಲಿ ಸಾಗುತ್ತಿದೆ. ಶತಾಯುಷಿಗಳಾಗಿ ಬದುಕಿದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಕೊಟ್ಟಿರುವ ಸಂದೇಶ ಸರ್ವ ಕಾಲಕ್ಕೂ ಸಲ್ಲುವಂತಹದು ಎಂದರು.
ಕಾರ್ಯಕ್ರಮದ ಪ್ರಯುಕ್ತವಾಗಿ ವೀರಶೈವ ಲಿಂಗಾಯತ ಬಸವ ಸಮಿತಿ ಅಧ್ಯಕ್ಷ ಎಚ್.ಬಿ ಮಂಜುನಾಥ್ ರವರ ನೇತೃತ್ವದಲ್ಲಿ 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ನಾಗಲಾಪುರ ವೀರಸಿಂಹಾಸನ ಮಠದ ಶ್ರೀ ತೆಜೇಶಲಿಂಗ ಮಹಾಸ್ವಾಮೀಜಿ, ಸಮಿತಿ ಪದಾಧಿಕಾರಿಗಳು ಹಾಜರಿದ್ದು ಅನ್ನ ಸಂತರ್ಪಣೆ ಕಾರ್ಯ ನೆರವೇರಿಸಿದರು.ವೀರಶೈವ ಲಿಂಗಾಯತ ಬಸವ ಸಮಿತಿ ಉಪಾಧ್ಯಕ್ಷ ಎಚ್.ಎನ್ ಮಂಜುನಾಥ್, ಕಾರ್ಯದರ್ಶಿ ಶಶಿಕಲಾ ಲೋಕೇಶ್, ಸಮಿತಿ ಸದಸ್ಯರಾದ ಕುಮಾರಸ್ವಾಮಿ, ಗುಳ್ಳಪ್ಪ, ವೀರಪ್ಪ ಲಾಲಿ, ಸಿದ್ದು ಲಾಲಿ, ಸಂತೋಷ್, ಮದನ್ ಸೇರಿ ಎಲ್ಲಾ ಸದಸ್ಯರು ಹಾಜರಿದ್ದರು.