ಸಾರಾಂಶ
ಚನ್ನಪಟ್ಟಣ: ಪತ್ರಕರ್ತರಿಗಾಗಿ ತಾಲೂಕು ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಶಿವಮಾದು ಮನವಿ ಮಾಡಿದರು.
ತಾಲೂಕು ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಲಭ್ಯತೆಗೆ ಅನುಸಾರವಾಗಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ ಸದಸ್ಯರಿಗೆ ಹಂಚಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಆದಾಯ ಹೆಚ್ಚಿಸಲು ಪತ್ರಕರ್ತರು ಸಹಕಾರಿಸಬೇಕಾಗಿದೆ ಎಂದರು.ಹೊಸದಾಗಿ ಗೃಹ ನಿರ್ಮಾಣ ಸಹಕಾರ ಸಂಘ ಆಗಿರುವುದರಿಂದ ಆದಾಯ ಕೂಡ ಕಡಿಮೆಯಾಗಿದ್ದು, ಪ್ರತಿ ತಿಂಗಳು ಸಂಘದ ಬೆಳವಣಿಗೆಗಾಗಿ ಸಂಘ ಮುಂದಿನ ದಿನಗಳಲ್ಲಿ ನಿಗದಿ ಮಾಡುವ ಶುಲ್ಕ ಪಾವತಿಸಲು ಎಲ್ಲರೂ ಕೈ ಜೊಡಿಸುವಂತೆ ಮನವಿ ಮಾಡಿದರು.
ಹೊಸದಾಗಿ ಇಬ್ಬರು ತಾಲೂಕು ಪತ್ರಕರ್ತರಾಗಿ ಸದಸ್ಯತ್ವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸದಸ್ಯರಾಗಿ ಸೇರಿಸಿಕೊಳ್ಳುವುದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಪಡೆದುಕೊಳ್ಳಲಾಯಿತು.ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಸು.ತ.ರಾಮೇಗೌಡ, ಮತ್ತೀಕೆರೆ ಜಯರಾಂ, ಮಂಗಳವಾರಪೇಟೆ ಲಕ್ಷ್ಮೀಪತಿ, ಸು.ನಾ.ನಂದಕುಮಾರ್, ಅಕ್ಕೂರು ರಮೇಶ್, ಗುರುಮೂರ್ತಿ, ನಿರ್ದೇಶಕರಾದ ಡಿ.ಎಂ.ಮಂಜುನಾಥ್, ಅಭಿಲಾಷ್, ನಯಾಜ್ ಪಾಷಾ, ಆರ್.ಶಂಕರ್, ಗೋ.ರಾ.ಶ್ರೀನಿವಾಸ್, ನಟರಾಜ್, ಹುಚ್ಚಯ್ಯನದೊಡ್ಡಿ ರಮೇಶ್, ಬೇವೂರು ಯೋಗೇಶ್ ಗೌಡ, ಆರ್.ರಮೇಶ್, ತಿಲಕ್‌ರಾಜ್, ವೆಂಕಟೇಶ್ ಇತರರಿದ್ದರು.ಪೊಟೋ೨೧ಸಿಪಿಟ೧: ಚನ್ನಪಟ್ಟಣ ತಾಲೂಕು ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.