ಶಾಮನೂರು ಕಟ್ಟಾ ಅನುಯಾಯಿ ಬಿಜೆಪಿ ತೆಕ್ಕೆಗೆ

| Published : Apr 12 2024, 01:08 AM IST / Updated: Apr 12 2024, 02:01 PM IST

ಸಾರಾಂಶ

ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಕಟ್ಟಾ ಅನುಯಾಯಿ ಬಿಜೆಪಿ ಸೇರ್ಪಡೆ ಆಗುವುದರೊಂದಿಗೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ.

 ದಾವಣಗೆರೆ :  ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಕಟ್ಟಾ ಅನುಯಾಯಿ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಆಪ್ತ ಬಳಗದಲ್ಲಿದ್ದ ನಗರಸಭೆ ಮಾಜಿ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ ಹಾಗೂ ಹಿರಿಯ ಮುಖಂಡ ಬೆಳ್ಳೂಡಿ ಮಂಜುನಾಥ ಹಾಗೂ ಬೆಂಬಲಿಗರು ಗುರುವಾರ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಸಂಸದ ಜಿ.ಎಂ. ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಆಗುವುದರೊಂದಿಗೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶಿವನಹಳ್ಳಿ ರಮೇಶ, ಬೆಳ್ಳೂಡಿ ಮಂಜುನಾಥ ಹಾಗೂ ಬೆಂಬಲಿಗರನ್ನು ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಸಂಸದ ಸಿದ್ದೇಶ್ವರ್‌ ಹಾರ ಹಾಕಿ, ಪಕ್ಷದ ಶಾಲು ಹಾಕಿ ಬಿಜೆಪಿಗೆ ಸ್ವಾಗತಿಸಿದರು. ಅಲ್ಲದೇ, ಶಿವನಹಳ್ಳಿಯವರ ದಾವಣಗೆರೆ ಹಾಗೂ ಹರಿಹರ ತಾಳೂಕು ಶಿವನಹಳ್ಳಿ ಗ್ರಾಮದ ಬೆಂಬಲಿಗರಿಗೆ ಪಕ್ಷಕ್ಕೆ ಬರಮಾಡಿಕೊಂಡರು.

ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್‌, ಎಸ್.ಎಂ. ವೀರೇಶ ಹನಗವಾಡಿ, ಲೋಕಿಕೆರೆ ನಾಗರಾಜ, ಬಿ.ಜಿ. ಅಜಯಕುಮಾರ, ಪಾಲಿಕೆ ಸದಸ್ಯೆ ರೇಖಾ ಸುರೇಶ ಗಂಡಗಾಳೆ, ಪಿ.ಸಿ. ಶ್ರೀನಿವಾಸ ಭಟ್, ಟಿ.ಶ್ರೀನಿವಾಸ ದಾಸಕರಿಯಪ್ಪ, ಶಿವನಗೌಡ ಪಾಟೀಲ, ಧನಂಜಯ ಕಡ್ಲೇಬಾಳ, ಅನಿಲಕುಮಾರ ನಾಯ್ಕ , ಶಿವನಗೌಡ ಪಾಟೀಲ, ವಕೀಲ ಎ.ಸಿ.ರಾಘವೇಂದ್ರ ಮೊಹರೆ ಇತರರು ಇದ್ದರು.