ಹಾಸನದ ವಿದ್ಯಾನಗರದಲ್ಲಿರುವ ಬಿ. ಎಸ್. ದೇಸಾಯಿ ಅವರ ಕಲಾ ಗ್ಯಾಲರಿಯಲ್ಲಿ ಖ್ಯಾತ ಚಿತ್ರಕಲಾವಿದ ಪಿ. ಎಸ್. ಕಡೆಮನಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಡೆಮನಿ ಅವರ ಚಿತ್ರಗಳು ವಿಭಿನ್ನ ನೆಲೆಯಲ್ಲಿ ಅರಳಿದ ಜೀವಂತ ಕಲಾಕೃತಿಗಳಂತೆ ಪ್ರಜ್ವಲಿಸುತ್ತಿವೆ. ಕಲಾವಿದರ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಅವರ ಚಿತ್ರಗಳು ಸಾಕ್ಷಿಯಾಗಿವೆ. ಹಾಸನದಲ್ಲಿ ಈ ರೀತಿಯ ಕಲಾ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಮೂಲಕ ಕಲಾಸಕ್ತರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಆಶಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕಲೆ ಎಲ್ಲರಿಗೂ ಸುಲಭವಾಗಿ ದಕ್ಕುವಂಥದ್ದಲ್ಲ. ಅದು ಸೂಕ್ಷ್ಮ ನೆಲೆಯಲ್ಲಿ ಅಭಿವ್ಯ ಕ್ತಿಗೊಳ್ಳುವ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಹಾಸನದ ವಿದ್ಯಾನಗರದಲ್ಲಿರುವ ಬಿ. ಎಸ್. ದೇಸಾಯಿ ಅವರ ಕಲಾ ಗ್ಯಾಲರಿಯಲ್ಲಿ ಖ್ಯಾತ ಚಿತ್ರಕಲಾವಿದ ಪಿ. ಎಸ್. ಕಡೆಮನಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಡೆಮನಿ ಅವರ ಚಿತ್ರಗಳು ವಿಭಿನ್ನ ನೆಲೆಯಲ್ಲಿ ಅರಳಿದ ಜೀವಂತ ಕಲಾಕೃತಿಗಳಂತೆ ಪ್ರಜ್ವಲಿಸುತ್ತಿವೆ. ಕಲಾವಿದರ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಅವರ ಚಿತ್ರಗಳು ಸಾಕ್ಷಿಯಾಗಿವೆ. ಹಾಸನದಲ್ಲಿ ಈ ರೀತಿಯ ಕಲಾ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಮೂಲಕ ಕಲಾಸಕ್ತರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಆಶಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಬಿ. ವಿ. ಮಲ್ಲಿಕಾರ್ಜುನಯ್ಯ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಬಿ. ಸಿ. ಲೋಕೇಶ್, ಚಿತ್ರಕಲಾವಿದ ಪಿ. ಎಸ್. ಕಡೆಮನಿ, ಬಿ. ಎಸ್. ದೇಸಾಯಿ, ಕಾರದಕಟ್ಟಿ, ಲಲಿತಕಲಾ ಅಕಾಡೆಮಿ ಸದಸ್ಯ ಮಂಜುನಾಥ್ ಸೇರಿದಂತೆ ಇತರರು ಇದ್ದರು.