ಸಾರಾಂಶ
ಜ. 13ರಂದು ಚುನಾವಣೆ ನಡೆದ ಹಿನ್ನಲೆಯಲ್ಲಿ ಇವರಿಬ್ಬರು ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ 8ನೇ ವಾರ್ಡಿನ ಶಿವುನಾಯಕ್ ಮತ್ತು 6ನೇ ವಾರ್ಡಿನ ವಸಂತಮ್ಮ ಕೃಷ್ಣೇಗೌಡ ಉಪಾಧ್ಯಕ್ಷೆ ಅಧಿಕಾರ ಸ್ವೀಕರಿಸಿದರು. ಕಳೆದ ಕಳೆದ 20 ತಿಂಗಳಿನಿಂದ ಖಾಲಿ ಇದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜ. 13ರಂದು ಚುನಾವಣೆ ನಡೆದ ಹಿನ್ನಲೆಯಲ್ಲಿ ಇವರಿಬ್ಬರು ಅವಿರೋಧ ಆಯ್ಕೆಯಾಗಿದರು. ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಕಂದಾಯಾಧಿಕಾರಿ ರಮೇಶ್, ವ್ಯವಸ್ಥಾಪಕಿ ಸುಧಾರಾಣಿ, ಸದಸ್ಯರಾದ ಪ್ರಕಾಶ್, ಶಂಕರ್, ಅಶ್ವಿನಿ ಪುಟ್ಟರಾಜು, ಶಂಕರ್ ಸ್ವಾಮಿ, ನಟರಾಜು, ಸೈಯದ್ ಸಿದ್ದಿಕ್, ಸೌಮ್ಯ ಲೋಕೇಶ್, ಮಾಜಿ ಸದಸ್ಯ ಕೆ. ವಿನಯ್, ಮುಖಂಡರಾದ ಆದರ್ಶ, ಧರ್ಮರಾಜು, ಸಮಂತ್, ಸಂಜಯ್ ತಿಲಕ್, ವೃಷಬೇಂದ್ರ, ಕಾಂಗ್ರೆಸ್ ಮುಖಂಡರು, ಶಿವುನಾಯಕ್ ಅಭಿಮಾನಿಗಳು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
---------------