ಸಾರಾಂಶ
ತಾಲೂಕಿನ ಎಸ್. ಕೊಡಗಿಹಳ್ಳಿ ಗ್ರಾಮ ಪಂಚಾಯಿತಿಗೆ ಕಾಳೇನಹಳ್ಳಿ ಕೆ.ಜಿ.ಶಿವಣ್ಣ ಅಧ್ಯಕ್ಷರಾಗಿ, ಕೊಡಿಗಿಹಳ್ಳಿ ಪಾಳ್ಯದ ವೆಂಕಟಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಎಸ್. ಕೊಡಗಿಹಳ್ಳಿ ಗ್ರಾಮ ಪಂಚಾಯಿತಿಗೆ ಕಾಳೇನಹಳ್ಳಿ ಕೆ.ಜಿ.ಶಿವಣ್ಣ ಅಧ್ಯಕ್ಷರಾಗಿ, ಕೊಡಿಗಿಹಳ್ಳಿ ಪಾಳ್ಯದ ವೆಂಕಟಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಜಿ ಶಿವಣ್ಣ ಮಾತನಾಡಿ, ಇರುವ ಇರುವ ಸಮಯದಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಂಡು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಗಳ ಸಹಕಾರ ಪಡೆದು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ಕೊಟ್ಟು ಚರಂಡಿ ಹಾಗೂ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡುತ್ತೇನೆ ಎಂದರು. ಈ ಚುನಾವಣೆ ಪ್ರಕ್ರಿಯೆಯನ್ನು ತಾಲೂಕು ಪಂಚಾಯಿತಿ ಶಿವಪ್ರಕಾಶ್, ತಾಲೂಕು ಕಚೇರಿ ಚುನಾವಣಾಧಿಕಾರಿ ಗುರುಪ್ರಸಾದ್ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಪಿಡಿಒ ಶಶಿಧರ್, ಗ್ರಾಮ ಪಂಚಾಯತಿ ಸದಸ್ಯರಾದ ತುಳಸೀದಾಸ್, ಅನಿತಾ, ತಿಮ್ಮಾಚಾರ್, ಗಂಗನರಸಮ್ಮ, ವೆಂಕಟಲಕ್ಷಮ್ಮ, ಜಯಮ್ಮ, ಆಶ್ವತ್ತೇಗೌಡ ಕೆ.ಜಿ, ನೀಲಮ್ಮ, ನಾಗರಾಜು, ಸೈಯದ್ ಖಲಂದರ್, ಧನಲಕ್ಷ್ಮೀ ಆರ್., ಮಂಜಮ್ಮ, ಎನ್.ಜಿ.ರಾಮೇಗೌಡ, ರಂಗರಾಜು ಎಚ್.ಆರ್, ಭಾರತಿ ಎ.ಬಿ, ಪ್ರೇಮ, ಕೆ.ಆರ್.ವೆಂಕಟೇಶ್ ಮತ್ತಿತರರು ಇದ್ದರು.