ಸಾಹಿತ್ಯದಲ್ಲಿ ಪ್ರಯೋಗಶೀಲತೆ ಇರಲಿ: ಡಾ.ಮಹೇಶ

| Published : Dec 15 2023, 01:30 AM IST

ಸಾಹಿತ್ಯದಲ್ಲಿ ಪ್ರಯೋಗಶೀಲತೆ ಇರಲಿ: ಡಾ.ಮಹೇಶ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ನಿರಂತರವಾಗಿ ಕನ್ನಡ ಸಾಹಿತ್ಯ ಓದುಬೇಕು ಆಗ ಮಾತ್ರ ಜ್ಞಾನ ಹೆಚ್ಚಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಪ್ರಯೋಗಶೀಲತೆ ಇರಬೇಕು ಎಂದು ಡಾ.ಮಹೇಶ ಎಸ್.ರುದ್ರಕರ್ ಹೇಳಿದರು. ಕಲಬುರಗಿ ತಾಲೂಕು ಕಸಾಪ ನಗರದ ಚನ್ನಬಸವೇಶ್ವರ ಪ್ರೌಢಶಾಲೆ ಜಾಗೃತಿ ಕಾಲೋನಿಯಲ್ಲಿ ನಡೆದ ಬೆಳಕು ವಾರಕ್ಕೊಂದು ಹೊಸ ಚಿಂತನೆ ಶಿವರಾಮ ಕಾರಂತ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿದ್ಯಾರ್ಥಿಗಳು ನಿರಂತರವಾಗಿ ಕನ್ನಡ ಸಾಹಿತ್ಯ ಓದುಬೇಕು ಆಗ ಮಾತ್ರ ಜ್ಞಾನ ಹೆಚ್ಚಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಪ್ರಯೋಗಶೀಲತೆ ಇರಬೇಕು ಎಂದು ಡಾ.ಮಹೇಶ ಎಸ್.ರುದ್ರಕರ್ ಹೇಳಿದರು.

ಕಲಬುರಗಿ ತಾಲೂಕು ಕಸಾಪ ನಗರದ ಚನ್ನಬಸವೇಶ್ವರ ಪ್ರೌಢಶಾಲೆ ಜಾಗೃತಿ ಕಾಲೋನಿಯಲ್ಲಿ ನಡೆದ ಬೆಳಕು ವಾರಕ್ಕೊಂದು ಹೊಸ ಚಿಂತನೆ ಶಿವರಾಮ ಕಾರಂತ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿವರಾಮ ಕಾರಂತರ ಬದುಕು ಮತ್ತು ಬರಹ ಎಂಬ ವಿಷಯದ ಮೇಲೆ ವಿಸ್ತಾರವಾಗಿ ಮಾತನಾಡಿ, ಇಂದಿನ ಸಾಹಿತ್ಯವು ಕಾರಂತರ ಸಾಹಿತ್ಯದ ಪ್ರಯೋಗಗಳು ಬಯಸುತ್ತವೆ ಎಂದರು.

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯದರ್ಶಿ ಪೀರಪ್ಪ ಹೂಗೊಂಡ ಮಾತನಾಡಿ, ಮಕ್ಕಳು ಮೊಬೈಲ್‍ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದನ್ನು ಆದಷ್ಟು ದೂರ ಮಾಡಿ, ಅವರಲ್ಲಿ ಶಿಸ್ತು, ಸೌಮ್ಯತೆ ತರಬೇಕು. ಪ್ರತಿಯೊಂದು ಶಾಲೆಯಲ್ಲಿ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್ ಘಟಕವನ್ನು ಆರಂಭಿಸಬೇಕು ಎಂದು ಹೇಳಿದರು.

ಶಾಲೆಯ ಮುಖ್ಯಗುರು ಮಾತಾಜಿ ನಾಗುರೆ ಮಾತನಾಡಿ, ಮಕ್ಕಳಿಗೆ ನಿರಂತರವಾಗಿ ಜ್ಞಾನ ಹೆಚ್ಚಿಸಲು ಕನ್ನಡ ಸಾಹಿತ್ಯ ಪರಿಷತ್ತಿನವರು ಶಾಲೆಯಲ್ಲಿ ವಿಚಾರವಂತ ವ್ಯಕ್ತಿ ಕರೆಸಿ ಕಾರ್ಯಕ್ರಮ ಆಯೋಜಿಸುತ್ತಾರೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಾಹಿತ್ಯ, ಸೈಬರ್, ಮಕ್ಕಳಿಗಾಗಿ ವಚನ ಮೇಳ, ವಿಚಾರ ಗೋಷ್ಠಿಗಳನ್ನು ತಾಲೂಕಿನ ಎಲ್ಲಾ ಶಾಲೆಗಳಲ್ಲಿಯೂ ಮಾಡಲಾಗುವುದು ಎಂದರು. ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಶಿಲ್ಪ ದಾಸ್ ಜೋಶಿ, ಕುಪೇಂದ್ರ ಬರಗಾಲಿ, ವಿಶ್ವನಾಥ ಯನಗುಂಟಿ, ಶರಣು ಹಾಗರಗುಂಡಗಿ, ಭಾಗ್ಯಶ್ರೀ ಮರಗೋಳ, ಸುನಿತಾ ಮಾಳಗಿ. ನಿರೂಪಣೆ ಕಾರ್ಯದರ್ಶಿ ವಿಶಾಲಾಕ್ಷಿ ಮಾಯಣ್ಣ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕವಿತಾ ಕವಳೆ ಇದ್ದರು.