ಶಾಸಕ ಸುರೇಶ್‌ ವಿರುದ್ಧ ಶಿವರಾಮ್‌ ಸುಳ್ಳು ಆರೋಪ

| Published : Nov 05 2025, 12:15 AM IST

ಸಾರಾಂಶ

ಮಾಜಿ ಸಚಿವ ಹಾಗೂ ಪರಾಜಿತ ಅಭ್ಯರ್ಥಿ ಬಿ ಶಿವರಾಂ ತಾಲೂಕಿನಲ್ಲಿ ನಡೆದ ೧೨೭ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳು ನನ್ನ ಪರಿಶ್ರಮದ ಫಲವಾಗಿದ್ದು, ಇದರಲ್ಲಿ ಶಾಸಕರಿಂದ ಯಾವುದೇ ಕೊಡುಗೆ ಇಲ್ಲ ಎಂದು ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆ ಸಿಕ್ಕ ಅಲ್ಪಸ್ವಲ್ಪ ಅನುದಾನದಲ್ಲಿ ಎಲ್ಲಾ ಹೋಬಳಿಗಳಲ್ಲಿ ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿದೆ. ಶಾಸಕರ ಪರಿಶ್ರಮ ಇಲ್ಲ ಎಂಬ ಹೇಳಿಕೆಯನ್ನು ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಅರಸೀಕೆರೆ ಮತ್ತು ಹಾಸನ ಹಾಗೂ ಬೇಲೂರಿನಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದು ಇನ್ನಾದರೂ ಸುಳ್ಳು ಮಾಹಿತಿ ನೀಡುವುದನ್ನು ಬಿಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಶಾಸಕ ಎಚ್ ಕೆ ಸುರೇಶ್‌ ಅವರ ಅಭಿವೃದ್ಧಿ ಕಾರ್ಯವನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಮಾಜಿ ಸಚಿವ ಬಿ ಶಿವರಾಮ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್ ಕೌರಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಜಿ ಸಚಿವ ಹಾಗೂ ಪರಾಜಿತ ಅಭ್ಯರ್ಥಿ ಬಿ ಶಿವರಾಂ ತಾಲೂಕಿನಲ್ಲಿ ನಡೆದ ೧೨೭ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳು ನನ್ನ ಪರಿಶ್ರಮದ ಫಲವಾಗಿದ್ದು, ಇದರಲ್ಲಿ ಶಾಸಕರಿಂದ ಯಾವುದೇ ಕೊಡುಗೆ ಇಲ್ಲ ಎಂದು ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆ ಸಿಕ್ಕ ಅಲ್ಪಸ್ವಲ್ಪ ಅನುದಾನದಲ್ಲಿ ಎಲ್ಲಾ ಹೋಬಳಿಗಳಲ್ಲಿ ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿದೆ. ಶಾಸಕರ ಪರಿಶ್ರಮ ಇಲ್ಲ ಎಂಬ ಹೇಳಿಕೆಯನ್ನು ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಅರಸೀಕೆರೆ ಮತ್ತು ಹಾಸನ ಹಾಗೂ ಬೇಲೂರಿನಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದು ಇನ್ನಾದರೂ ಸುಳ್ಳು ಮಾಹಿತಿ ನೀಡುವುದನ್ನು ಬಿಡಬೇಕು ಎಂದರು.ಕಾಡಾನೆ ಪ್ರತಿಭಟನೆಯಲ್ಲಿ ನಾಪತ್ತೆ :

ಕಾಡಾನೆ ಸಮಸ್ಯೆಯಿಂದ ಬೆಳೆ ಹಾನಿ, ಪ್ರಾಣಹಾನಿಯಿಂದ ರೊಚ್ಚಿಗೆದ್ದ ಜನರು ನಡೆಸಿದ ಪ್ರತಿಭಟನೆಗಳಲ್ಲಿ ಶಾಸಕ ಎಚ್ ಕೆ ಸುರೇಶ್ ಪಾಲ್ಗೊಂಡು ಬೆಂಬಲಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲೂ ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಾಗೂ ಜನಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಬಿ ಶಿವರಾಮ ಅವರು ಒಂದೇ ಒಂದು ಪ್ರತಿಭಟನೆಯಲ್ಲಿ ಭಾಗವಹಿಸದೆ ನಾಪತ್ತೆಯಾಗುವುದರ ಜೊತೆಗೆ ಸೌಜನ್ಯಕ್ಕೂ ಭೇಟಿ ನೀಡದ ಇವರಿಗೆ ಶಾಸಕರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.ಕಾಂಗ್ರೆಸ್ ಪಕ್ಷ ಮೂರು ಭಾಗ:

ಹಾಸನ, ಅರಸೀಕೆರೆ ಸೋಲಿನಿಂದ ಹತಾಶೆಗೊಂಡು ಬೇಲೂರು ತಾಲೂಕಿಗೆ ಕಾಲಿಟ್ಟ ದಿನದಿಂದಲೇ ಕಾಂಗ್ರೆಸ್‌ ಪಕ್ಷವನ್ನು ಮನೆ ಒಂದು ಮೂರು ಬಾಗಿಲು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಗ ಶಾಸಕರಾಗಿದ್ದ ದಿ. ವೈ. ಎನ್ ರುದ್ರೇಶ್‌ ಗೌಡರ ಕುಟುಂಬಕ್ಕೆ ಕಿರುಕುಳ ಕೊಟ್ಟು ತೇಜೋವಧೆಗೆ ಪ್ರಯತ್ನಿಸಿದರು ಎಂದು ಅವರ ಸ್ವಪಕ್ಷಿಯರೇ ಅವರನ್ನು ದೂರುತ್ತಾರೆ. ಎರಡು-ಮೂರು ಗುಂಪುಗಳು ನಿರ್ಮಾಣವಾಗಿದ್ದು ಅದಕ್ಕೆ ಕಾರಣ ಶಿವರಾಂ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದರು.ಸೋಲಿನ ಹತಾಶೆಯಿಂದ ಆರೋಪ:

ಮಾಜಿ ತಾಪಂ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಶಾಸಕ ಎಚ್ ಕೆ ಸುರೇಶ್ ಚುನಾವಣೆಯಲ್ಲಿ ಗೆದ್ದು ಜನಪರ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಮರು ದಿನದಿಂದ ಶಾಸಕ ಎಚ್ ಕೆ ಸುರೇಶ್ ಅವರ ಮೇಲೆ ಹೊಟ್ಟೆಕಿಚ್ಚಿನ ರಾಜಕಾರಣ ಮಾಡುತ್ತಿದ್ದು, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಮಾಜಿ ಶಾಸಕ ಬಿ ಶಿವರಾಮ್ ಅವರಿಗೆ ಜನತೆಯು ವಿಶ್ರಾಂತಿ ನೀಡಿದ್ದಾರೆ. ಸ್ವಲ್ಪದಿನಗಳ ಮಟ್ಟಿಗೆ ಮನೆಯಲ್ಲಿದ್ದು ಮೊಮ್ಮಕ್ಕಳ ಜೊತೆ ಆಟ ಆಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಲಹೆ ನೀಡಿದರು.ಅಭಿವೃದ್ಧಿ ಬಗ್ಗೆ ಜನತೆಯ ತೀರ್ಮಾನ :

ನಮ್ಮ ಬಳಿ ಸರ್ಕಾರ ಇಲ್ಲ, ಕಾಂಗ್ರೆಸ್ ಸರ್ಕಾರ ಇದೆ. ಶಾಸಕ ಸುರೇಶ್ ಅವರು ಅಲ್ಪಸ್ವಲ್ಪ ಅನುದಾನಗಳನ್ನು ತರುತ್ತಿದ್ದಾರೆ. ಅನುದಾನ ಬೇಕು ಎಂದು ಶಿವರಾಂ ಅವರನ್ನೇನೂ ಕೇಳಿಲ್ಲ. ಅನುದಾನದ ವಿಷಯವಾಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲು ಶಾಸಕ ಸುರೇಶ್‌ ಅವರಿಗೇ ಮಾತ್ರ ಸಾಧ್ಯ. ವಾಸ್ತವವಾಗಿ ಸುರೇಶ್‌ ಅವರು ಹಲವು ಗ್ರಾಮಗಳಿಗೆ ಕೋಟಿ ರುಪಾಯಿಗಳ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದಾರೆ. ಅಭಿವೃದ್ಧಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲೂ ಶಾಸಕರಾಗಿ ಸುರೇಶ್ ಆಯ್ಕೆಯಾಗಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಬೇಲೂರು ಅಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್, ಮುಖಂಡರಾದ ವಿನಯ್, ರಾಘವೇಂದ್ರ ಇದ್ದರು.