ಲಿಂಗಪಟ್ಟಣ ಡೈರಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಶಿವರಾಮು, ಪದ್ಮ ಅವಿರೋಧ ಆಯ್ಕೆ

| Published : Jul 06 2025, 11:48 PM IST

ಲಿಂಗಪಟ್ಟಣ ಡೈರಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಶಿವರಾಮು, ಪದ್ಮ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

11 ನಿರ್ದೇಶಕರನ್ನು ಒಳಗೊಂಡ ಲಿಂಗಪಟ್ಟಣ ಡೈರಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಮು ಮತ್ತು ಪದ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಡಿ.ಆಶಾ ಅವಿರೋಧ ಆಯ್ಕೆ ಘೋಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಲಿಂಗಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವರಾಮು ಮತ್ತು ಪದ್ಮ ಅವಿರೋಧ ಆಯ್ಕೆಯಾದರು.

11 ನಿರ್ದೇಶಕರನ್ನು ಒಳಗೊಂಡ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಮು ಮತ್ತು ಪದ್ಮ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಡಿ.ಆಶಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಸಂಘದ ನೂತನ ಅಧ್ಯಕ್ಷ ಶಿವರಾಮು ಮಾತನಾಡಿ, ಡೈರಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವೆ. ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಘ ಹಾಗೂ ಸರ್ವ ಸದಸ್ಯರ ಏಳಿಗೆಗೆ ಶ್ರಮ ವಹಿಸುವೆ ಎಂದು ಭರವಸೆ ನೀಡಿದರು.

ಈ ವೇಳೆ ನಿರ್ದೇಶಕರಾದ ಬಿ.ಗಂಗಾಧರ್, ಎಲ್.ಸಿ.ಮಂಜು, ಉಮೇಶ್, ಬಾಲು ಮಹದೇವ, ಎಲ್.ಎಸ್.ರಮೇಶ್, ಚಿಕ್ಕ ಹುಚ್ಚಹೆಗಡೆ, ಆರ್.ಜೀವನ್, ಕಾಳಯ್ಯ, ಪುಟ್ಟಮ್ಮ , ಸಂಘದ ಮುಖ್ಯ ಕಾರ್ಯ ನಿರ್ವಾಹಕ ಕೃಷ್ಣೇಗೌಡ ಮತ್ತು ಸಿಬ್ಬಂದಿ ಸಿದ್ದೇಗೌಡ, ಮುಖಂಡರಾದ ಶಿವನಂಜು, ಶಿವಲಿಂಗೇಗೌಡ, ಲಿಂಗರಾಜು, ಗಂಗಾಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇಂದು ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮ

ಕೆ.ಎಂ.ದೊಡ್ಡಿ:

ಪಂಚ ಗ್ಯಾರಂಟಿ ಸಮಿತಿ ರಾಜಾಧ್ಯಕ್ಷ ಎಚ್.ಎಂ.ರೇವಣ್ಣ ಅವರ ಆದೇಶದ ಮೇರೆಗೆ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರಿಗೆ ಐದು ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮ ಜು.7ರಂದು ಜರುಗಲಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಬಿ.ಬಸವರಾಜು ತಿಳಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ತಾಲೂಕು ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷರು, ಸದಸ್ಯರು, ತಾಪಂ ಇಒ, ಪಂಚ ಗ್ಯಾರಂಟಿ ಸಮಿತಿ ಸರ್ಕಾರಿ ಅಧಿಕಾರಿಗಳು ಭಾಗವಹಿಸುವರು. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಯೊಜನೆಗಳ ಸಂಬಂಧಿಸಿದಂತೆ ಮುಕ್ತವಾಗಿ ತಿಳಿಸಿ ಸ್ಥಳದಲ್ಲಿಯೇ ಪರಿಹಾರ ಕಂಡು ಕೊಳ್ಳಬೇಕು ಎಂದು ಕೋರಿದ್ದಾರೆ.