ಡಿ.18 ರಿಂದ 24ರವರೆಗೆ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ: ಚಂದ್ರಶೇಖರ ಸ್ವಾಮೀಜಿ

| Published : Sep 17 2025, 01:05 AM IST

ಡಿ.18 ರಿಂದ 24ರವರೆಗೆ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ: ಚಂದ್ರಶೇಖರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯದು ಕಾಣುತ್ತಿಲ್ಲ. ಧರ್ಮ ಸಂದೇಶಗಳನ್ನು ಹೇಳುತ್ತಾದರೂ ಪಾಲನೆ ಮಾತ್ರ ಆಗುತ್ತಿಲ್ಲ. ಮಾತನಾಡುವ ಶಕ್ತಿ ಹೆಚ್ಚಾಗಿ ತಿದ್ದುವ ಶಕ್ತಿ ಕಡಿಮೆಯಾಗಿದೆ. ಇದರಿಂದ ಸಮಾಜದಲ್ಲಿ ಅಂಕು-ಡೊಂಕು ಹೆಚ್ಚಾಗಿದೆ. ಪ್ರಸ್ತುತ ವಚನ ಸಾಹಿತ್ಯದ ತತ್ವ, ಸಿದ್ಧಾಂತಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನುಕುಲಕ್ಕೆ ದಾರಿದೀಪವಾಗಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಐತಿಹಾಸಿಕ ಸುತ್ತೂರಿನ ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ಡಿ.18 ರಿಂದ ಡಿ.24 ರವರೆಗೆ ತಾಲೂಕಿನಲ್ಲಿ ನಡೆಯಲಿದೆ. ಅರ್ಥಪೂರ್ಣ ಆಚರಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ ಹಾಗೂ ಬಿ.ಜಿ.ಪುರ ಹೊರಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕುಂದೂರಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಧ್ಯಕ್ಷ ಮೂರ್ತಿ ನಿವಾಸದ ಅವರಣದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಹಾಗೂ ಯುವ ಘಟಕಗಳ ಪದಾಧಿಕಾರಿಗಳ ಆಯ್ಕೆ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಜಯಂತಿ ಯಶಸ್ವಿಗೆ ಶಕ್ತಿ ನೀಡಬೇಕೆಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯದು ಕಾಣುತ್ತಿಲ್ಲ. ಧರ್ಮ ಸಂದೇಶಗಳನ್ನು ಹೇಳುತ್ತಾದರೂ ಪಾಲನೆ ಮಾತ್ರ ಆಗುತ್ತಿಲ್ಲ. ಮಾತನಾಡುವ ಶಕ್ತಿ ಹೆಚ್ಚಾಗಿ ತಿದ್ದುವ ಶಕ್ತಿ ಕಡಿಮೆಯಾಗಿದೆ. ಇದರಿಂದ ಸಮಾಜದಲ್ಲಿ ಅಂಕು-ಡೊಂಕು ಹೆಚ್ಚಾಗಿದೆ. ಪ್ರಸ್ತುತ ವಚನ ಸಾಹಿತ್ಯದ ತತ್ವ, ಸಿದ್ಧಾಂತಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನುಕುಲಕ್ಕೆ ದಾರಿದೀಪವಾಗಬೇಕೆಂದು ಸಲಹೆ ನೀಡಿದರು.

ಒತ್ತಡದ ಬದುಕಿನಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ದಾರಿ ತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುವುದಕ್ಕಿಂತ ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ಪರಿಸರ ಬೆಳೆಸುವತ್ತ ಜಾಗೃತಿ ಮತ್ತು ಅರಿವು ಇರಬೇಕು ಎಂದರು.

ತಾಲೂಕು ಅಧ್ಯಕ್ಷ ಮೂರ್ತಿ ಮಾತನಾಡಿ, ಪಟ್ಟಣದಲ್ಲಿ 1 ವಾರ ನಡೆಯಲಿರುವ ಜಯಂತಿ ಮಹೋತ್ಸವವನ್ನು ಅರ್ಥಪೂರ್ಣ ಆಚರಣೆಯೊಂದಿಗೆ ಯಶಸ್ವಿಯಾಗಿ ನಡೆಸಲು ನೂತನ ಯುವ ಘಟಕದ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಕಂಕಣ ಬದ್ಧರಾಗಿ ಕೆಲಸ ನಿರ್ವಹಿಸುವ ಮೂಲಕ ಗುರುಕೃಪೆಗೆ ಪಾತ್ರರಾಗಬೇಬೆಂದು ಕರೆ ನೀಡಿದರು.

ಇದೇ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಮತ್ತು ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಹಂಗ್ರಾಪುರ ಮಠದ ಬಸವಲಿಂಗದೇಶಿಕೇಂದ್ರ ಸ್ವಾಮೀಜಿ, ಕುಂದೂರು ಮಠದ ಚನ್ನಕೇಶವ ಸ್ವಾಮೀಜಿ, ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲೇಶ, ಮುಖಂಡರಾದ ಬಬ್ರುವಾಹನ, ದೊಡ್ಡಬೂಹಳ್ಳಿ ಗಜೇಂದ್ರ, ಸಂಶೆಟ್ಟಿಪುರ ಲೋಕೇಶ್ ಸೇರಿದಂತೆ ಮಹಾಸಭಾದ ತಾಲೂಕು ಘಟಕದ ಎಲ್ಲಾ ನಿರ್ದೇಶಕರು ಹಾಗೂ ಹಿರಿಯ ಮುಖಂಡರು ಇದ್ದರು.