ಸಾರಾಂಶ
ಶಿವಯೋಗಿ ಸಿದ್ದರಾಮರು ಕೇವಲ ಶಿವಯೋಗಿ ಮಾತ್ರವಲ್ಲ, ಕಾಯಕ ಯೋಗಿಯಾಗಿ ಕಾಯಕದಿಂದ ಬಂದಿರುವುದನ್ನು ಮಾತ್ರ ಸ್ವೀಕರಿಸಿ ಅದರಲ್ಲಿ ಉಳಿದಿರುವುದನ್ನು ದಾಸೋಹ ಮಾಡುವಂತೆ ಕರೆ ಕೊಟ್ಟವರೆಂದು ನಿವೃತ್ತ ಪ್ರಾಂಶುಪಾಲ ತಿರುಪತಿಹಳ್ಳಿ ಶಿವಶಂಕರಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಶಿವಯೋಗಿ ಸಿದ್ದರಾಮರು ಕೇವಲ ಶಿವಯೋಗಿ ಮಾತ್ರವಲ್ಲ, ಕಾಯಕ ಯೋಗಿಯಾಗಿ ಕಾಯಕದಿಂದ ಬಂದಿರುವುದನ್ನು ಮಾತ್ರ ಸ್ವೀಕರಿಸಿ ಅದರಲ್ಲಿ ಉಳಿದಿರುವುದನ್ನು ದಾಸೋಹ ಮಾಡುವಂತೆ ಕರೆ ಕೊಟ್ಟವರೆಂದು ನಿವೃತ್ತ ಪ್ರಾಂಶುಪಾಲ ತಿರುಪತಿಹಳ್ಳಿ ಶಿವಶಂಕರಪ್ಪ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಯಾವಾಗಲು ನೆಲ ಮೂಲವನ್ನು ಗಟ್ಟಿಗೊಳಿಸಬೇಕು.
ಅಂತಹವರಲ್ಲಿ ಸಿದ್ದರಾಮರು ಸೇರುತ್ತಾರೆ. ಸಾಲಮುಕ್ತಿ ಕೇಂದ್ರವನ್ನು ೧೨ನೇ ಶತಮಾನದಲ್ಲೆ ಸ್ಥಾಪನೆ ಮಾಡುತ್ತಾರೆ. ಸಮಾಜದ ಒಳಿತಿಗಾಗಿ ಮಠವನ್ಮು ಕಟ್ಟುತ್ತಾರೆ. ಇವತ್ತು ಕೂಡ ಅವರು ಕಟ್ಟಿದ ಶಿವಾಲಯಗಳಿವೆ.
ತಮ್ಮ ಜೀವನವನ್ನೆ ಜನರ ಸೇವೆಗಾಗಿ ಮುಡುಪಾಗಿಟ್ಟರು. ಕಾಯಕ ಎಂದರೆ ಕೃಷಿ, ಅಂದು ಆಶಾ ಕಿರಣವಾಗಿ ಮಠಗಳು ಇದ್ದವು. ಇಂದು ಅದು ಕಡಿಮೆ ಆಗಿದೆ ಎಂದರು.
ಹಳ್ಳಿಗಳ ಉದ್ಧಾರಕ್ಕಾಗಿ ಪ್ರಥಮ ಬಾರಿಗೆ ಸಿದ್ದರಾಮರು ಮುಂದಾದರು. ಹನ್ನೆರಡನೇ ಶತಮಾನದಲ್ಲಿ ಕೆರೆಕಟ್ಟೆ ಕಟ್ಟಿಸಿದರು. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ. ನಷ್ಟದಲ್ಲಿರುವ ರೈತರಿಗೆ ಆದಾಯದ ಉತ್ಪನ್ನ ಎಂದರೇ ಹಾಲು ಮಾರಾಟ.
ಶುದ್ಧವಾದ ಗಾಳಿ ಮುಂದೆ ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಮರಗಿಡಗಳ ಪೋಷಣೆ ಕಡಿಮೆ ಆಗಿದೆ. ದುಂಬಿಗಳು ಎಂದು ನಾಶವಾಗುತ್ತವೆಯೋ ಅವತ್ತು ಒಳ್ಳೆ ವಾತಾವರಣ ನಾಶವಾಗುತ್ತದೆ. ಸಮಾಜದ ಕೆಲಸ ಎಂದರೆ ಎಲ್ಲಾ ಜೀವಿಗಳಿಗೂ ಒಳಿತಾಗುವ ಕೆಲಸ ಮಾಡುವುದು ಎಂದು ಸಲಹೆ ನೀಡಿದರು.
ನಳಂದ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್. ರಾಜಶೇಖರ್ ಮಾತನಾಡಿ, ‘ಮಕ್ಕಳಿಗೆ ನಾವು ಕಲಿಸುವ ವಾತಾವರಣದಲ್ಲಿ ಮುಂದಿನ ಭವಿಷ್ಯ ಅಡಗಿದೆ. ಸಿದ್ದರಾಮ ಅವರಿಗೆ ಅವರ ತಾಯಿ ಕಲಿಸಿದ ಸಂಸ್ಕೃತಿಯು ಇಂದು ಪ್ರಜ್ವಲಿಸುತ್ತಿದೆ.
ಮೊಬೈಲ್, ಟಿವಿಯಿಂದ ಇಂದು ಯುವ ಜನತೆ ಸಮಾಜದಲ್ಲಿ ಮಾರಕವಾಗಿ ಬೆಳೆಯುತ್ತಿದ್ದಾರೆ. ಆದರೇ ಮೊಬೈಲ್ ಎಂಬುದು ಒಳ್ಳೆಯದು, ಕೆಟ್ಟದು ಎರಡು ಕಾಣಬಹುದು. ನಾವು ಬದಲಾವಣೆ ಆಗದೆ ಸಮಾಜ ಬದಲಾವಣೆ ಆಗಲು ಸಾಧ್ಯವಿಲ್ಲ’ ಎಂದರು.
ತಹಸೀಲ್ದಾರ್ ಮೋಹನ್ ಕುಮಾರ್, ಅಖಿಲ ಕರ್ನಾಟಕ ಭೋವಿ ಮಹಾಸಭಾದ ರಾಜ್ಯಾಧ್ಯಕ್ಷ ಎಚ್. ಮಂಜಪ್ಪ, ಜಿಲ್ಲಾ ವೀರಶೈವ ಸಂಘದ ಉಪಾಧ್ಯಕ್ಷ ಭುವನಾಕ್ಷ, ಅಖಿಲಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ಸ್ವಾತಂತ್ರ್ಯ ಹೋರಾಟಗಾರಯೆ ಹೆಚ್.ಎಂ. ಶಿವಣ್ಣ, ಬಸವ ಕೇಂದ್ರದ ಅಧ್ಯಕ್ಷರಾದ ಯು.ಎಸ್. ಬಸವರಾಜು ಇದ್ದರು. ಯದೀಶ್ ಶೆಟ್ಟಿ ಸ್ವಾಗತಿಸಿದರು.ಸಿದ್ಧರಾಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.