ಗ್ರಾಪಂ ಅಧ್ಯಕ್ಷೆ ಶಿವಿಬಾಯಿ ಮನರೇಗಾ ಕಾಮಗಾರಿ ಪರಿಶೀಲನೆ

| Published : Aug 27 2024, 01:34 AM IST

ಗ್ರಾಪಂ ಅಧ್ಯಕ್ಷೆ ಶಿವಿಬಾಯಿ ಮನರೇಗಾ ಕಾಮಗಾರಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಕೋಳಿಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ೫ ಲಕ್ಷ ರು. ವೆಚ್ಚದಲ್ಲಿ ನೀರುಗಾಲುವೆ ಹಾಗೂ ರಸ್ತೆ ಅಭಿವೃದ್ಧಿ ನಿರ್ಮಾಣ ನಡೆಯುತ್ತಿರುವ ಪುಣಜನೂರು ಗ್ರಾಪಂ ಅಧ್ಯಕ್ಷೆ ಶಿವಿಬಾಯಿ ಗಣೇಶ್ ನಾಯಕ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಮನರೇಗಾ ಒಂಬುಡ್ಸ್ ಮನ್ ಜತೆ ತೆರಳಿ ಪರಿಶೀಲಿಸಿದರು.

ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಪಂ ವ್ಯಾಪ್ತಿಯ ಕೋಳಿಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ೫ ಲಕ್ಷ ರು. ವೆಚ್ಚದಲ್ಲಿ ನೀರುಗಾಲುವೆ ಹಾಗೂ ರಸ್ತೆ ಅಭಿವೃದ್ಧಿ ನಿರ್ಮಾಣ ನಡೆಯುತ್ತಿರುವ ಪುಣಜನೂರು ಗ್ರಾಪಂ ಅಧ್ಯಕ್ಷೆ ಶಿವಿಬಾಯಿ ಗಣೇಶ್ ನಾಯಕ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಮನರೇಗಾ ಒಂಬುಡ್ಸ್ ಮನ್ ಜತೆ ತೆರಳಿ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿ, ನರೇಗಾ ಯೋಜನೆ ಗ್ರಾಪಂಗಳಿಗೆ ವರದಾನವಾಗಿದ್ದು, ಯೋಜನೆಯಡಿ ಸಸಿ ನೆಡುವುದು, ಬದುನಿರ್ಮಾಣ, ಜಮೀನಿಗೆ ದಾರಿನಿರ್ಮಾಣ, ಕಲ್ವರ್ಟ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಯೋಜನೆಯಡಿ ಕೂಲಿಕಾರ್ಮಿಕರಿಗೆ ಪ್ರತಿದಿನ 349 ರು. ಕೂಲಿ ನೀಡಲಾಗುತ್ತಿದೆ. ಈ ಭಾಗದ ಜನರು ಉದ್ಯೋಗ ಖಾತರಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಮಗಾರಿ ಪರಿಶೀಲಿಸಿದ ನಂತರ ಗ್ರಾಪಂ ಅಧ್ಯಕ್ಷರು ವೃಕ್ಷ ಬೆಳೆಸುವ ಅಭಿಯಾನದಡಿ ಗಿಡನೆಟ್ಟು ನೀರೆರೆದರು. ಗ್ರಾಪಂ ನರೇಗಾ ಯೋಜನೆ ಒಂಬಡ್ಸ್‌ಮನ್ ಎ.ಬಿ.ಶಂಕರ್, ಗ್ರಾಪಂ ಸದಸ್ಯರಾದ ಲಲಿತಾಬಾಯಿ, ಮಹೇಶ್‌ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗನಾಯಕ ಹಾಗೂ ಮುಖಂಡರು ಮತ್ತು ಕೋಳಿಪಾಳ್ಯ ಗ್ರಾಮದ ಯಜಮಾನರು, ಗ್ರಾಮಸ್ಥರು ಹಾಜರಿದ್ದರು.