ಶ್ರೀ ಕ್ಷೇತ್ರ ಕೈವಾರದಲ್ಲಿ ಶಿವರಾತ್ರಿ ಕಾರ್ಯಕ್ರಮಗಳು

| Published : Mar 08 2024, 01:51 AM IST

ಸಾರಾಂಶ

ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ಭೀಮಲಿಂಗೇಶ್ವರ ಸ್ವಾಮಿಯವರ ವಿಶೇಷ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಉತ್ಸವವು ಕೈವಾರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶ್ರೀಕ್ಷೇತ್ರ ಕೈವಾರ ಸದ್ಗುರು ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ಮಠದ ಸಾಂಸ್ಕೃತಿಕ ವೇದಿಕೆಯಾದ ನಾದ ಸುಧಾರಸದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ 8ರ ಇಂದು ಸಂಜೆ 6 ಗಂಟೆಯಿಂದ ಪರಿಮಳ ಅರಳುಮಲ್ಲಿಗೆ ತಂಡದವರಿಂದ ಭರತನಾಟ್ಯ, ಕೈವಾರ ರಾಮಣ್ಣ ತಂಡದವರಿಂದ ಗಾಯನ, ಲೀಲಾ ಲಕ್ಷ್ಮೀನಾರಾಯಣ್ ತಂಡದವರಿಂದ ಗಾಯನ, ಶ್ರೀಮೌರ್ಯಟ್ರಸ್ಟ್ ಶ್ವೇತ ಶ್ರೀರಾಮಗುಪ್ತ ತಂಡದವರಿಂದ ಗಾಯನ, ಜಯಮ್ಮ ಮತ್ತು ಶೈಲಜಾ.ಕೆ. ರವರಿಂದ ಗಾಯನ, ಶ್ರೀಯೋಗಿನಾರೇಯಣ ಸಂಗೀತ ಶಾಲೆಯ ಲಕ್ಷ್ಮೀಕೆಂಪರಾಜು ತಂಡದಿಂದ ಗಾಯನ, ವಾನರಾಶಿ ಭಾಗ್ಯಲಕ್ಷ್ಮೀ ತಂಡದವರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ರಾತ್ರಿ 9-30 ಗಂಟೆಯಿಂದ ಮರುದಿನ ಬೆಳಿಗ್ಗೆ 5-30 ರವರೆಗೆ ಹರಿಕಥಾ ವಿದ್ವಾನ್, ಯೋಗಿ ನಾರೇಯಣ ಮಠದ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮತ್ತು ತಂಡದವರಿಂದ ಹರಿಕಥೆಯನ್ನು ಏರ್ಪಡಿಸಲಾಗಿದೆ.

ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕೈವಾರದಲ್ಲಿ ಪಂಚ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಹಾಶಿವರಾತ್ರಿಯಂದು ಬೆಳಿಗ್ಗೆ 6 ಗಂಟೆಗೆ ಮತ್ತು 10 ಗಂಟೆಗೆ ವಿಶೇಷ ರುದ್ರಾಭಿಷೇಕವನ್ನು ಏರ್ಪಡಿಸಲಾಗಿದೆ. ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ಏಕವಾರ ರುದ್ರಾಭಿಷೇಕ ಇರುತ್ತದೆ. ರಾತ್ರಿಯಿಡೀ ದೇವಾಲಯದಲ್ಲಿ ಗ್ರಾಮಸ್ಥರಿಂದ ಭಜನೆಯನ್ನು ಏರ್ಪಡಿಸಲಾಗಿದೆ. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ.

ವಿಶೇಷ ಪಲ್ಲಕ್ಕಿ : ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ಭೀಮಲಿಂಗೇಶ್ವರ ಸ್ವಾಮಿಯವರ ವಿಶೇಷ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಉತ್ಸವವು ಕೈವಾರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.