ಶಾರ್ಟ್‌ ಸರ್ಕ್ಯೂಟ್‌: ತೆಂಗೂ, ಅಡಕೆ ಸಸಿ ಭಸ್ಮ

| Published : Apr 04 2024, 01:00 AM IST

ಸಾರಾಂಶ

ಬೃಹತ್ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ತಾಲೂಕಿನ ನಿಟ್ಟೂರು ಹೋಬಳಿ ಕಳ್ಳನಹಳ್ಳಿಯ ರೈತ ರಂಗಯ್ಯಗೆ ಸೇರಿದ ಫಸಲಿಗೆ ಬಂದಿದ್ದ ಸುಮಾರು 50 ತೆಂಗಿನ ಸಸಿಗಳು,100 ಕ್ಕೂಅಧಿಕ ಅಡಿಕೆ ಸಸಿಗಳು, ನೀರಾವರಿ ಪೈಪ್ ಗಳು, ರಾಸುಗಳಿಗಾಗಿ ಹಾಕಿದ್ದ ಮೇವು ಸಂಪೂರ್ಣ ಸುಟ್ಟು ಹೋದ್ದು, ಅಪಾರ ಹಾನಿಯಾಗಿದೆ

ಗುಬ್ಬಿ: ಬೃಹತ್ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ತಾಲೂಕಿನ ನಿಟ್ಟೂರು ಹೋಬಳಿ ಕಳ್ಳನಹಳ್ಳಿಯ ರೈತ ರಂಗಯ್ಯಗೆ ಸೇರಿದ ಫಸಲಿಗೆ ಬಂದಿದ್ದ ಸುಮಾರು 50 ತೆಂಗಿನ ಸಸಿಗಳು,100 ಕ್ಕೂಅಧಿಕ ಅಡಿಕೆ ಸಸಿಗಳು, ನೀರಾವರಿ ಪೈಪ್ ಗಳು, ರಾಸುಗಳಿಗಾಗಿ ಹಾಕಿದ್ದ ಮೇವು ಸಂಪೂರ್ಣ ಸುಟ್ಟು ಹೋದ್ದು, ಅಪಾರ ಹಾನಿಯಾಗಿದೆ.

ವಿದ್ಯುತ್ ಅವಘಡಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿಶೇಷವಾಗಿ ರೈತರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ.ಇಲ್ಲವಾದಲ್ಲಿ ಇಂತಹ ಆಕಸ್ಮಿಕ ಘಟನೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕುವರು. ತಕ್ಷಣ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕಿದೆ ಎನ್ನುತ್ತಾರೆ ಗ್ರಾಮದ ಉಪನ್ಯಾಸಕ ರಮೇಶ್.

ಸಂಬಂಧಿಸಿದವರು ಸೂಕ್ತ ಪರಿಹಾರ ನೀಡದಿದ್ದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿ,ಜೀವನ ನಿರ್ವಹಣೆ ಕಷ್ಟವಾಗುವುದು.ಬದುಕು ಕಟ್ಟಿಕೊಳ್ಳಲು ಸಹಕಾರ ಬೇಕಿದೆ ಎಂದು ರೈತ ರಂಗಯ್ಯ ಅಳಲು ತೋಡಿಕೊಂಡರು.