ಸಾರಾಂಶ
ತಾಲೂಕು ಆಸ್ಪತ್ರೆಗಳ ಕುಂದು-ಕೊರತೆಗಳ ಕುರಿತು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಆದರೆ, ನವಲಗುಂದ ತಾಲೂಕು ಆಸ್ಪತ್ರೆ ಅತ್ಯಂತ ಶುಚಿಯಾಗಿದೆ. ಆದರೆ, ವೈದ್ಯರ ಕೊರತೆ ಬಗ್ಗೆ ಕೇಳಿ ಬರುತ್ತಿವೆ ಎಂದು ರಾಯಚೂರು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ನವಲಗುಂದ:
ಆಸ್ಪತ್ರೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಲಾಗಿದೆ. ಆದರೆ, ವೈದ್ಯರ ಕೊರತೆ ಹಾಗೂ ಯಂತ್ರೋಪಕರಣಗಳ ನಿರ್ವಹಣೆ ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಯಚೂರು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.ಸರ್ಕಾರದ ನಿರ್ದೇಶನದಂತೆ ಅವರು ಸೋಮವಾರ ಪಟ್ಟಣದ ತಾಲೂಕು ಆಸ್ಪತ್ರೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳ ಕುಂದು-ಕೊರತೆಗಳ ಕುರಿತು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಆದರೆ, ನವಲಗುಂದ ತಾಲೂಕು ಆಸ್ಪತ್ರೆ ಅತ್ಯಂತ ಶುಚಿಯಾಗಿದೆ. ಆದರೆ, ವೈದ್ಯರ ಕೊರತೆ ಬಗ್ಗೆ ಕೇಳಿ ಬರುತ್ತಿವೆ ಎಂದರುಮುಖ್ಯ ವೈದ್ಯಾಧಿಕಾರಿ ರೂಪಾ ಕಿಣಗಿ ಮಾತನಾಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ನಿರ್ವಹಣೆ, ಆಸ್ಪತ್ರೆ ಹಾಗೂ ಎಕ್ಸ್-ರೆ ಮಷಿನ್ ವಾರ್ಷಿಕ ನಿರ್ವಹಣೆ, ವೈದ್ಯರ ಕೊರತೆ, ಆಸ್ಪತ್ರೆಯಲ್ಲಿ ಔಷಧಿ ಕೊಠಡಿ ನಿರ್ಮಿಸಲು ಹಾಗೂ ಇತರೆ ಬೇಡಿಕೆಗಳನ್ನು ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಸುಧೀರ ಸಾಹುಕಾರ, ನೀಲಪ್ಪ ಕರ್ಲವಾಡ, ಸುಭಾಷ ಮಂಗಳಿ, ಮುತ್ತು ಚಿಕ್ಕನರಗುಂದ, ಸಹದೇವ ಪೂಜಾರ, ಉಮೇಶ ಪರಕಾಳಿ, ಎಸ್.ಎನ್. ಸಿದ್ರಾಮಶೆಟ್ಟರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿದ್ದರು.