ಶಿವಮೊಗ್ಗದಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರು ಪೊಲೀಸರ ವಶಕ್ಕೆ

| Published : Jan 01 2024, 01:15 AM IST

ಶಿವಮೊಗ್ಗದಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರು ಪೊಲೀಸರ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂದೂಕು, ಪಿಸ್ತೂಲು ಯಾರ ಕೈಗೂ ಸಿಗದಂತೆ ಇಡಬೇಕು. ಆದರೆ, ಅವುಗಳ ಬಗ್ಗೆ ನಿರ್ಲಕ್ಷ್ಯ ತಳೆದಾಗ ಆಗುವ ಅಪಾಯಗಳು ವಿಪರೀತ ಎಂಬುದಕ್ಕೆ ಈಗಾಗಲೇ ಹಲವಾರು ನಿದರ್ಶನಗಳು ಘಟಿಸಿವೆ. ಶಿವಮೊಗ್ಗದಲ್ಲೂ ಯುವಕರಿಬ್ಬರು ಕಾರಿನಲ್ಲಿ ಬಂದು ಗಾಳಿಯಲ್ಲಿ ಏರ್‌ ಗನ್‌ನಿಂದ ಗುಂಡು ಹಾರಿಸಿ, ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಇಬ್ಬರು ಯುವಕರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಂದ ಒಂದು ಏರ್‌ ಗನ್‌ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ನಗರದ ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆ ಸಮೀಪ ಶಿವಮೊಗ್ಗ – ಭದ್ರಾವತಿ ಹೆದ್ದಾರಿಯ‌ಲ್ಲಿ ಡಿ.26ರಂದು ಇಬ್ಬರು ಯುವಕರು ಕಾರಿನಿಂದ ಇಳಿದು ಕುಣಿದಿದ್ದಾರೆ. ಇದೇ ವೇಳೆ ಒಬ್ಬಾತ ಏರ್‌ ಗನ್‌ ಹಿಡಿದುಕೊಂಡಿದ್ದು ಅದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಬಳಿಕ ಏರ್‌ ಗನ್‌ ಹಿಡಿದುಕೊಂಡು ಕಾರಿನಲ್ಲಿ ತೆರಳಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಪರಿಶೀಲನೆ ನಡೆಸಿದ ತುಂಗಾ ನಗರ ಠಾಣೆ ಪೊಲೀಸರು ಚಿಕ್ಕಮಗಳೂರು ಜಿಲ್ಲೆ ಸಿರಗನಹಳ್ಳಿಯ ಹರ್ಷ ಪಟೇಲ್‌ (23) ಮತ್ತು ಅಜ್ಜಂಪುರದ ಅಭಿಷೇಕ್‌ (23) ಎಂಬಾತರನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- - - (-ಏರ್‌ಗನ್‌.ಜೆಪಿಜಿ)

ಸಾಂದರ್ಭಿಕ ಚಿತ್ರ.