ನಾಗಾ ಸಾಧುಗಳನ್ನು ಮಾದರಿಯಾಗಿ ಸ್ವೀಕರಿಸಬೇಕೇ: ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶ್ನೆ

| Published : Feb 02 2025, 01:01 AM IST

ನಾಗಾ ಸಾಧುಗಳನ್ನು ಮಾದರಿಯಾಗಿ ಸ್ವೀಕರಿಸಬೇಕೇ: ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತ ಚಳವಳಿಯ ಮೂಲಕ ದಲಿತ ಸಾಹಿತ್ಯ ಬೆಳೆದು ಬಂದಿತು. ಸಂವಿಧಾನ ಅಪಚಾರ ಮಾಡುವ ತೆರಮರೆಗೆ ಸರಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಹೀಗಾಗಿ ಭಿನ್ನಾಭಿಪ್ರಾಯಗಳನ್ನು ಮರೆತು ದಸಂಸದ ಎಲ್ಲ ಬಣಗಳು ಒಂದು ವೇದಿಗೆ ಬರಬೇಕು.

ಕನ್ನಡಪ್ರಭ ವಾರ್ತೆ ಮೈಸೂರುನಾಗ ಸಾಧುಗಳು, ಅಘೋರಿಗಳು ಕೆಲವೊಂದು ಅಸಾಧಾರಣ ಆಚರಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತವರನ್ನು ಮಾದರಿಯಾಗಿ ಸ್ವೀಕರಿಸಬೇಕೆ ಎಂದು ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು, ದಲಿತ ವಿದ್ಯಾರ್ಥಿ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ನಡೆದ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಫಾತಿವಾ ಶೇಖ್, ರವಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮತ್ತು ಲೇಖಕ ಹಾರೋಳ್ಳಿ ರವೀಂದ್ರ ರಚಿತ ಸಾಂಸ್ಕೃತಿಕ ರಾಜಕಾರಣ, ಇಡಬ್ಲ್ಯೂಎಸ್ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕುಂಭಮೇಳದಲ್ಲಿ ನಾಗ ಸಾಧುಗಳು ಹೊಡೆದಾಟ, ಜಗಳ ಕಾಣುತ್ತಿದೆ. ಹೀಗೆ ಕೋಪ- ದ್ವೇಷ ನಿವಾರಿಸಿಕೊಳ್ಳದವರು ಅಧ್ಯಾತ್ಮಿಕತೆ ಪರಿಪಾಲನೆ ಮಾಡಲು ಹೇಗೆ ಸಾಧ್ಯ? ನೀರಲ್ಲಿ ಮುಳುಗಿದ ಮಾತ್ರಕ್ಕೆ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಬಸವಣ್ಣ, ಪುರಂದರದಾಸರು ಹೇಳಿದ್ದಾರೆ. ಆದರೆ ಕುಂಭಮೇಳದಲ್ಲಿ ಇದನ್ನೇ ನಮ್ಮ ಪರಂಪರೆ, ಇತಿಹಾಸ ಎಂದು ನಂಬಿಸಲಾಗುತ್ತಿದೆ. ಇದರಿಂದ ಭಾರತ ವಿಶ್ವಗುರುವಾಗಲೂ ಸಾಧ್ಯವೇ? ಎಂದರು.ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ನೇತೃತ್ವವನ್ನು ಸರ್ಕಾರವೇ ವಹಿಸುವ ಮೂಲಕ ಆಧುನೀಕತೆ ಅಣಕ ಮಾಡುತ್ತಿದೆ ಎಂದು ಅವರು ಹೇಳಿದರು.ಮೇಲ್ವರ್ಗದ ಶೇ. 4ರಷ್ಟು ಜನರ ಬಳಿ ಶೇ. 50ರಷ್ಟು ಸಂಪತ್ತು ಇದೆ. ಶೇ. 50ರಷ್ಟು ಜನರ ಬಳಿ ಶೇ. 10- 15 ರಷ್ಟು ಸಂಪತ್ತು ಇದೆ. ಯಾರ ಬಳಿ ಸಂಪತ್ತು ಶೇಖರಣೆ ಗೊಂಡವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಇದರ ಪರಿಣಾಮವನ್ನು ಲೇಖಕ ಹಾರೊಳ್ಳಿ ರವೀಂದ್ರ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಲಯದ ತೀರ್ಪು ಏನಾದರು ಬರಬಹುದು. ಆದರೆ, ಇಡಬ್ಲ್ಯೂಎಸ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯಬೇಕು ಎಂದು ಅವರು ಕರೆ ನೀಡಿದರು.ಮಾಜಿ ಸಚಿವ ಬಿ.ಬಿ.ನಿಂಗಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ದಲಿತ ಚಳವಳಿಯ ಮೂಲಕ ದಲಿತ ಸಾಹಿತ್ಯ ಬೆಳೆದು ಬಂದಿತು. ಸಂವಿಧಾನ ಅಪಚಾರ ಮಾಡುವ ತೆರಮರೆಗೆ ಸರಿಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಹೀಗಾಗಿ ಭಿನ್ನಾಭಿಪ್ರಾಯಗಳನ್ನು ಮರೆತು ದಸಂಸದ ಎಲ್ಲ ಬಣಗಳು ಒಂದು ವೇದಿಗೆ ಬರಬೇಕು ಎಂದರು.ಮಾಜಿ ಮೇಯರ್ ಪುರುಷೋತ್ತಮ್, ಚಿಂತಕ ಶಿವಸುಂದರ್ ಕೃತಿ ಕುರಿತು ಮಾತನಾಡಿದರು. ಕೆಂಪಯ್ಯ, ಡಾ.ವಿಜಯಲಕ್ಷ್ಮೀ ಮಾನಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ ನಾಗವಾಲ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಸಿ. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದರು.ಪ್ರಕಾಶಕ ಶ್ರೀಧರ ಅಘಲಯ, ಡಾ. ಚಂದ್ರಗುಪ್ತ, ಡಾ. ರಂಗಸ್ವಾಮಿ ಕಾಳಿಹುಂಡಿ, ಎಚ್‌.ಪಿ. ವಿಶ್ವಪ್ರಸಾದ್ ಇದ್ದರು.