ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮುಖ್ಯ: ಮಂಜುನಾಥ್

| Published : Mar 30 2024, 12:53 AM IST

ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮುಖ್ಯ: ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ನಾಮಪತ್ರದ ವೇಳೆ ಶಕ್ತಿ ಪ್ರದರ್ಶನಕ್ಕಿಂತ ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮುಖ್ಯ. ಬ್ಯಾಲೆಟ್ ಪೇಪರ್‌ನಲ್ಲಿ ಶಕ್ತಿ ಪ್ರದರ್ಶನ ಆಗಬೇಕು. ಅಷ್ಟು ಜನ ಸೇರಿಸಿದರು, ಇಷ್ಟು ಜನ ಸೇರಿಸುವುದು ಮುಖ್ಯವಲ್ಲ. ಕೆಲವೆಡೆ ಒಬ್ಬರೇ ಹೋಗಿ ನಾಮಪತ್ರ ಸಲ್ಲಿಸಿದವರೂ ಗೆದ್ದಿದ್ದಾರೆ. ಗುರವಾರ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ರಾಮನಗರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಟಾಂಗ್ ನೀಡಿದರು.

ತಾಲೂಕಿನ ಕೋಡಂಬಳ್ಳಿ ಬಳಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆ ವೇಳೆ ಅವೆಲ್ಲಾ ಸಾಮಾನ್ಯ: ಚುನಾವಣಾ ಕಣದಲ್ಲಿ ಮತ್ತೊಬ್ಬ ಡಾ.ಮಂಜುನಾಥ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಸಮಯದಲ್ಲಿ ಇಂತವೆಲ್ಲಾ ಸಾಮಾನ್ಯ. ಎಲ್ಲಿ ಟಫ್ ಫೈಟ್ ಇರುತ್ತೆ, ಅಂತಹ ಸ್ಥಳಗಳಲ್ಲಿ ಈಗಾಗುತ್ತೆ. ನಾನು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡ್ತಿದ್ದೇನೆ. ಹಾಗಾಗಿ ಬೇರೆಯವರ ಸ್ಪರ್ಧೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.ಇದರಿಂದ ಗೊಂದಲ ಏನು ಸೃಷ್ಠಿ ಆಗಲ್ಲ ಎಂದರು.

ಕಳೆದ ೧೨ ದಿನಗಳಿಂದ ೮ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಎಲ್ಲಾ ಕಡೆಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದಾರೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಹೃದಯ, ಮನಸ್ಸುಗಳು ಒಂದಾಗಿವೆ. ಎಲ್ಲರೂ ಉತ್ಸಾಹದಿಂದ ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಕ್ಷೇತ್ರದಲ್ಲಿ ಒಂದು ರೀತಿ ಹವಾ ಕ್ರಿಯೇಟ್ ಆಗಿದೆ. ಡಾ.ಸಿ.ಎನ್.ಮಂಜುನಾಥ್ ಗೆಲ್ಲಿಸಲು ಎಲ್ಲರೂ ಕೆಲಸ ಮಾಡ್ತಿದ್ದಾರೆ. ಏ.೪ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಪಕ್ಷದ ಹಿರಿಯ ನಾಯಕರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು. ಪೊಟೋ೨೯ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಡಾ.ಮಂಜುನಾಥ್ ಹಾಗೂ ಇತರರನ್ನು ಸನ್ಮಾನಿಸಲಾಯಿತು.