ಸಾರಾಂಶ
ವಿದ್ಯಾರ್ಥಿಗಳು ಶಾಲೆಗಳಲ್ಲಿ ಹೇಳಿಕೊಟ್ಟ ಪಾಠ, ಪ್ರವಚನಗಳನ್ನು ಆಯಾ ದಿನವೇ ಮನನ ಮಾಡಿಕೊಂಡು ಪಾಠದ ಜೊತೆಯಲ್ಲಿ ಆಟೋಟಗಳಂತಹ ಕ್ರೀಡೆಗಳಲ್ಲೂ ಭಾಗವಹಿಸಬೇಕು. ಆ ಮೂಲಕ ಬಹುಮುಖ ಪ್ರತಿಭೆಗಳನ್ನು ಬೆಳಕಿಗೆ ತರಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಚನ್ನಗಿರಿ: ವಿದ್ಯಾರ್ಥಿಗಳು ಶಾಲೆಗಳಲ್ಲಿ ಹೇಳಿಕೊಟ್ಟ ಪಾಠ, ಪ್ರವಚನಗಳನ್ನು ಆಯಾ ದಿನವೇ ಮನನ ಮಾಡಿಕೊಂಡು ಪಾಠದ ಜೊತೆಯಲ್ಲಿ ಆಟೋಟಗಳಂತಹ ಕ್ರೀಡೆಗಳಲ್ಲೂ ಭಾಗವಹಿಸಬೇಕು. ಆ ಮೂಲಕ ಬಹುಮುಖ ಪ್ರತಿಭೆಗಳನ್ನು ಬೆಳಕಿಗೆ ತರಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಗುರುವಾರ ತಾಲೂಕಿನ ಸಂತೆಬೆನ್ನೂರು ಗ್ರಾಮದ ಕೆ.ಪಿ.ಎಸ್. ಶಾಲೆಯಲ್ಲಿ ₹15 ಲಕ್ಷ ವೆಚ್ಚದ ಶಾಲಾ ಕೊಠಡಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಮಯ ವ್ಯರ್ಥ ಮಾಡದೇ ವಿದ್ಯಾರ್ಥಿಗಳು ಆಸಕ್ತಿ ಇರುವಂತಹ ವಿಷಯಗಳಲ್ಲಿ ಜ್ಞಾನ ಪಡೆಯಬೇಕು. ಪ್ರತಿಭೆಗೆ ಅನುಗುಣವಾಗಿ ಮೆಡಿಕಲ್, ಎಂಜಿನಿಯರಿಂಗ್, ನರ್ಸಿಂಗ್‌ನಂಥ ಹಲವು ಕೋರ್ಸ್‌ಗಳಿಗೆ ಸೇರ್ಪಡೆಯಾಗುವಂತೆ ಮಾಡುವ ಆಶಯ, ಉದ್ದೇಶ ನನ್ನದಾಗಿದೆ ಎಂದರು.ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಇಂತಹ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಿ, ಯಶಸ್ಸು ಪಡೆಯುವಂತಹ ಪೂರ್ವಭಾವಿ ತರಬೇತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6ರಿಂದ 8 ತಿಂಗಳ ತನಕ ಉಚಿತ ತರಬೇತಿಯನ್ನು ನೀಡುವ ಉದ್ದೇಶ ನನ್ನದಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಕೆಪಿಸಿಸಿ ಸದಸ್ಯ ಹೊದಿಗೆರೆ ರಮೇಶ್, ದಿಶಾ ಸಮಿತಿಯ ಸದಸ್ಯ ಮೂರ್ತಪ್ಪ, ಪಾಂಡೋಮಟ್ಟಿ ಚಂದ್ರಮ್ಮ, ಪ್ರಾಚಾರ್ಯ ಶಾರದ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮದ್ ವಿನಸ್, ಎಂ.ಬಿ.ನಾಗರಾಜ್, ಡಿ.ಬಿ.ಕಿರಣ್, ನಯಾಜ್, ಶಿವರಾಜ್, ಅಸೀಪ್, ನಾಗರಾಜ್ ಉಪಸ್ಥಿತರಿದ್ದರು.- - -
-3ಕೆಸಿಎನ್ಜಿ2:ಸಂತೆಬೆನ್ನೂರು ಕೆಪಿಎಸ್ ಶಾಲೆ ನೂತನ ಕೊಠಡಿಗಳ ನಿರ್ಮಾಣಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಗುದ್ದಲಿ ಪೂಜೆ ನೆರವೇರಿಸಿದರು.