ಸಾರಾಂಶ
ತರೀಕೆರೆಯಲ್ಲಿ ವಿಚಾರ ಶ್ರಾವಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆತಂಪನ್ನು ನೀಡುವುದೇ ಮತ್ತು ಶಾಂತವಾಗಿ ಇರುವಂತಹ ಮಾಸ ಎಂದರೇ ಶ್ರಾವಣ ಮಾಸ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಬಿ.ಆರ್.ನೀಲಕಂಠಪ್ಪ ಹೇಳಿದ್ದಾರೆ.
ಶನಿವಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಲಿ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗ ವಾಗಿ ಪಟ್ಟಣದ ಉಮಾದೇವಿ ದಯಾನಂದ ಅವರ ನಿವಾಸದಲ್ಲಿ ಏರ್ಪಡಿಸಿದ್ದ ವಿಚಾರ ಶ್ರಾವಣ ಕಾರ್ಯಕ್ರಮ ಶರಣರು ಕಟ್ಟ ಬಯಸಿದ ಸಮಾಜ ಮತ್ತು ಇಂದಿನ ವಾಸ್ತವ ಕುರಿತು ಮಾತನಾಡಿದರು.ಅನುಭವಿಗಳಿಂದ ವೀರಗಾಥೆಗಳನ್ನು ಶ್ರಾವಣ ಮಾಸದ ಕಥೆಗಳನ್ನು ಕೇಳುತ್ತಿದ್ದೆವು, ಶ್ರಾವಣದಲ್ಲಿ ಹೊಸತನ ಮೂಡುತ್ತದೆ, ಶರಣರು ಸರಳವಾದ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿದರು. ಶರಣ ಸಾಹಿತ್ಯ ಆಡುಮಾತಿನ ಸಾಹಿತ್ಯವಾಗಿದೆ. ಅಂತರಂಗದ ಶುದ್ಧಿ ಮತ್ತು ಬಹಿರಂಗ ಶುದ್ಧಿ ಬಹಳ ಮುಖ್ಯ, ಆಸೆಯೇ ದುಃಖಕ್ಕೆ ಕಾರಣ, ಇತರರಿಗೆ ಕೊಟ್ಟು ಸಂತೋಷ ಪಡಬೇಕು ಎಂದು ಹೇಳಿದರು.
ಪ್ರಾಮಾಣಿಕವಾಗಿ ಇರುವ ವ್ಯಕ್ತಿ ಸಂತೃಪ್ತಿಯಿಂದ ಇರುತ್ತಾರೆ. ಹಿಂಸೆ ಮಾಡಬಾರದು, ದೀನದಲಿತರಿಗೆ ಸಹಾಯ ಮಾಡಬೇಕು. ಅರಿಷಡ್ವರ್ಗಗಳನ್ನು ಗೆದ್ದವರು ಮಹಾನ್ ವ್ಯಕ್ತಿಗಳಾಗಿದ್ದಾರೆ. ಮಕ್ಕಳನ್ನು ತಿದ್ದಬೇಕು. ಮಕ್ಕಳಿಗೆ ಶರಣರ ಕಥೆ ಗಳನ್ನು ಹೇಳಬೇಕು. ಮಕ್ಕಳಿಗೆ ಉತ್ತಮ ಆಲೋಚನೆಗಳ ಬಗ್ಗೆ ಹೇಳಿಕೊಡಬೇಕು. ಉತ್ತಮವಾದ ವಿಚಾರ ಗಳಿದ್ದರೆ ಉತ್ತಮ ಸಮಾಜ ಕಟ್ಟಬಹುದು. ಒಳ್ಳೆಯ ಮನೋಭಾವನೆಗೆ ಅದ್ಯತೆ ಕೊಡಬೇಕು ಎಂದು ವಿವರಿಸಿದರು.ಉಮಾ ದಯಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಬ್ಬಗಳೆಂದರೆ ವಿಚಾರ ವಿನಿಮಯ ಆಗಬೇಕು, ಸೌಹಾರ್ದತೆ ಮೂಡಿಸಬೇಕು. ವಿಚಾರ ಶ್ರಾವಣ ಕಾರ್ಯಕ್ರಮ ಇದನ್ನು ಕಲಿಸಿದೆ ಎಂದು ಹೇಳಿದರು.
ಸಾಹಿತಿ ಮನಸುಳಿ ಮೋಹನ್ ಮಾತನಾಡಿ ಅದರ್ಶಗಳ ಭಾಷಣಗಳು ಅನುಕರಣೆಯಿಂದ ಕೂಡಿರಬೇಕು. ಎಲ್ಲಾ ಸಾರ್ವಜನಿಕರು ಸಭ್ಯ ಜೀವನದ ಕುರಿತು ಬೆಳಕು ಚೆಲ್ಲಿದ್ದಾರೆ ಎಂದರು.ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ ಶ್ರಾವಣ ಮಾಸ ಎಂದರೆ ಹಬ್ಬ, ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಶರಣರು ಮತ್ತು ದಾರ್ಶನಿಕರ ವಿಚಾರ, ಆಶಯ ಮತ್ತು ಚಿಂತನೆಗಳನ್ನು ತಿಳಿಯಬೇಕು ಎಂದು ನುಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣದಲ್ಲಿ ಮತ್ತು ಅಡಳಿತದಲ್ಲಿ ಶರಣರ ಬದುಕನ್ನುಅನುಸರಿಸುವಂತೆ ಆಗಬೇಕು ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಚೇತನ್ ಗೌಡ, ಹಿರಿಯ ಕಲಾವಿದ ಕನ್ನಡಶ್ರೀ ಬಿ.ಎಸ್.ಭಗವಾನ್, ಟಿ.ಜಿ. ಸದಾನಂದ್, ಸುನಿತ ಕಿರಣ್, ವಿಶಾಲಾಕ್ಷಮ್ಮ, ರಾಮಚಂದ್ರಪ್ಪ, ತಿಪ್ಪೇಶಪ್ಪ, ಆಶಾ ವಿಠಲ್ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಂದ ವಚನ ಗಾಯನ ನಡೆಯಿತು.27ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಲಿ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉಮಾದೇವಿ ದಯಾನಂದ ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಬಿ.ಆರ್.ನೀಲಕಂಠಪ್ಪ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಸಾಹಿತಿ ಮನಸುಳಿ ಮೋಹನ್, ಸ.ನೌ.ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ ಮತ್ತಿತರರು ಇದ್ದರು.